ಜುಲೈ 31ರ ತುರ್ತು ಘೋಷಣೆ: ಕರಾವಳಿ ಶಾಲೆಗಳಿಗೆ `ಮಳೆ ರಜೆ’
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಜುಲೈ 31ರ ಬುಧವಾರ ಕರಾವಳಿ ಭಾಗದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಬುಧವಾರ ಬೆಳಗ್ಗೆ 7.20ಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ…
ನ್ಯಾಯಾಲಯಕ್ಕೆ ಬೇಕು 50 ಸ್ವಯಂ ಸೇವಕರು!
ಕುಮಟಾ ತಾಲೂಕು ಕಾನೂನು ಸೇವಾ ಸಮಿತಿಗೆ 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಹುಡುಕಾಟ ನಡೆದಿದೆ. ಯುವ ಸಮುದಾಯ, ನಿವೃತ್ತ ಅಧಿಕಾರಿ-ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರಿಗೂ ಅವಕಾಶವಿದೆ. ಕುಮಟಾ ತಾಲೂಕು ವ್ಯಾಪ್ತಿಯ ಸಮಾಜ ಸೇವೆಯಲ್ಲಿ ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು. ನ್ಯಾಯಾಲಯದ…
ಈ ಕಂಠ ಮಾಧುರ್ಯಕ್ಕೆ ಸೋಲದ ಕಿವಿಯಿಲ್ಲ..
ಕೊಳಲಿನಿಂದ ಹೊರಹೊಮ್ಮುವ ಸ್ವರದ ಮಾಧುರ್ಯಕ್ಕೂ ಮಿಗಿಲಾದ ಮಾಧುರ್ಯ ಹೊರಡಿಸುವ ಮಧುರಾತಿಮಧುರ ಕೊರಳಿನ ಒಡೆಯರು ಹರಿಮನೆ ಕೃಷ್ಣ ಭಾಗವತರು. ಶ್ರುತಿ ಏರಿಸಿದಂತೆ ಹೆಚ್ಚಾಗುವ ಸ್ವರದ ಇಂಪು, ತಮಗಿಂತಲೂ ಹೆಚ್ಚು ವಯಸ್ಸಾದ, ಜಾಗರೂಕತೆಯಿಂದ ಕಾಯ್ದುಕೊಂಡಬoದಿರುವ ಹಾರ್ಮೋನಿಯಂ ಪೆಟ್ಟಿಗೆ ತೆಗೆದು ಶ್ರುತಿ ಇಟ್ಟು ಮೊದಲ ಪದ್ಯ…
ಕುಮಟಾ – ಸಿದ್ದಾಪುರ ಬಸ್ ಓಡಾಟಕ್ಕೆ ವಿಚಿತ್ರ ಷರತ್ತು!
ಕುಮಟಾ: ಮಳೆಹಾನಿಯಿಂದ ಸ್ಥಗಿತಗೊಂಡಿದ್ದ ಕುಮಟಾ-ಬಡಾಳ-ಸಿದ್ದಾಪುರ ಬಸ್ಸು ಮಂಗಳವಾರ ಮತ್ತೆ ಓಡಾಟ ಶುರು ಮಾಡಿದೆ. ಆದರೆ, `ಬಸ್ಸಿನಲ್ಲಿದ್ದ ಪ್ರಯಾಣಿಕರು ಸೇತುವೆ ಬಳಿ ಇಳಿದು ಖಾಲಿ ಬಸ್ಸನ್ನು ಮಾತ್ರ ಸೇತುವೆ ಮೆಲೆ ಓಡಾಡಲು ಅನುವು ಮಾಡಿಕೊಡಬೇಕು. ಬಸ್ಸು ಸೇತುವೆ ದಾಡಿದ ನಂತರ ಮತ್ತೆ ಎಲ್ಲರೂ…
ಸಂತ್ರಸ್ತರ ಕತೆ ಅಯೋಮಯ: ಕಾಸು ಇದ್ದರೂ ಖರ್ಚು ಮಾಡುವ ಹಾಗಿಲ್ಲ!
ಕುಮಟಾ: ತಹಶೀಲ್ದಾರ್ ಪ್ರವೀಣ ಕರಾಂಡೆ ಅವರನ್ನು ನಿಪ್ಪಾಣಿಗೆ ವರ್ಗ ಮಾಡಿದ ಸರ್ಕಾರ ಹೊಸ ತಹಶೀಲ್ದಾರರ ನೇಮಕಕ್ಕೆ ಆಸಕ್ತಿ ತೋರಿಲ್ಲ. ಹೀಗಾಗಿ ತಹಶೀಲ್ದಾರರ ಖಾತೆಯಲ್ಲಿರುವ ಹಣ ಸಂತ್ರಸ್ತರ ಖಾತೆಗೆ ಜಮಾ ಆಗಿಲ್ಲ. ಮಳೆ ಹಾನಿ ಹಾಗೂ ನೆರೆ ನಡುವೆ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಸಂತ್ರಸ್ತರ…
ಇನ್ಮುಂದೆ ಇಲ್ಲಿ ಸರಾಯಿ ಸಿಗಲ್ಲ!
ಕಾರವಾರ: ಕೋಡಿಭಾಗದ ಅರಣ್ಯ ವಸತಿಗೃಹದ ಬಳಿ ಇದ್ದ ಅಕ್ರಮ ಸರಾಯಿ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿರುವ ಎಲ್ಲಾ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದು, ಇನ್ಮುಂದೆ ಅಲ್ಲಿ ಸರಾಯಿ ಸಿಗಲ್ಲ! ಅಳವೆವಾಡದ ಕೋಡಿಭಾಗದ ಸೇತುವೆ ತಳಭಾಗ ವಿನಾಯಕ ಪೆಡ್ನೇಕರ್ ಎಂಬಾತ…
ಮಲಗಿದಲ್ಲಿಯೇ ಸಾವನಪ್ಪಿದ ಹೊಟೇಲ್ ಕಾರ್ಮಿಕ
ಶಿರಸಿ: ಹುಲೆಕಲ್ ರಸ್ತೆಯ ಪರ್ಜುಲಿ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ನಾಯ್ಕ (60) ಹೊಟೇಲಿನಲ್ಲಿಯೇ ಸಾವನಪ್ಪಿದ್ದಾರೆ. ಹೆಗಡೆಕಟ್ಟಾದ ಗೋವಿಂದ ನಾಯ್ಕ ಕಳೆದ 9 ವರ್ಷಗಳಿಂದ ರಾಮನಗರದ ಹುಲೆಕಲ್ ರೋಡಿನ ಪರ್ಜುಲಿ ಹೋಟೆಲ್’ನಲ್ಲಿದ್ದರು. ಹೋಟೆಲಿನವರು ಹೇಳಿದ ಎಲ್ಲಾ ಕೆಲಸಗಳನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದರು.…
ಕಾರವಾರದಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ
ಕಾರವಾರ: ಕಾಂಗ್ರೆಸ್ ಸರ್ಕಾರದ ಹಗರಣಗಳ ತನಿಖೆಗೆ ಆಗ್ರಹಿಸಿ ಬಿಜೆಪಿ ಬೆಂಗಳೂರಿಗೆ ಪಾದಯಾತ್ರೆ ಆಯೋಜಿಸಿದೆ. ಅಗಸ್ಟ್ 4ರಂದು ಮೈಸೂರಿನಲ್ಲಿ ಪ್ರತಿಭಟಸಲು ಸಿದ್ಧತೆ ನಡೆದಿದ್ದು, ಮಾಜಿ ಶಾಸಕಿ ರೂಪಾಲಿ ನಾಯ್ಕ ಕಾರವಾರದ ಜನರು ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ. `ದಲಿತರಿಗೆ ಸಿಗಬೇಕಾದ ಸೌಲಭ್ಯಗಳನ್ನು…
ಉತ್ತರ ಕನ್ನಡವನ್ನು ನಿರ್ಲಕ್ಷಿಸಿದ ಸರ್ಕಾರ: ಶಾಸಕ ದಿನಕರ ಶೆಟ್ಟಿ ಅಸಮಧಾನ
ಕುಮಟಾ: `ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರದಿಂದ ಬರುವ ಸೌಲಭ್ಯ ಅತ್ಯಂತ ಕಡಿಮೆ. ಈ ಬಗ್ಗೆ ವಿಧಾನಸಭೆಯಲ್ಲಿ ಕೂಗಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸರಸ್ವತಿ ಪಿಯು ಕಾಲೇಜಿನಲ್ಲಿ ನಡೆದ ಪತ್ರಿಕಾ…
ಮಾರಿ ಜಾತ್ರೆಗೆ ಮದ್ಯದಂಗಡಿ ಬಂದ್
ಭಟ್ಕಳ: ಅಗಸ್ಟ್ 1ರವರೆಗೆ ಭಟ್ಕಳದಲ್ಲಿ ಮಾರಿಕಾಂಬಾ ದೇವಿಯ ಜಾತ್ರೆ ನಡೆಯಲಿದೆ. ಈ ಅವಧಿಯಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಲು ಎಲ್ಲಾ ಬಗೆಯ ಸರಾಯಿ ಮಾರಾಟ ಮಳಿಗೆಯನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪೊಲೀಸ್ ವರದಿ ಆಧರಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಈ ಆದೇಶ ಹೊರಡಿಸಿದ್ದಾರೆ.…








