6
ನೆರೆ ಸಂತ್ರಸ್ತರಿಗೆ ನೋಟಿಸ್!

ಹೊನ್ನಾವರ: ಲಿಂಗನಮಕ್ಕಿ ಹಾಗೂ ಗೇರಸೊಪ್ಪ ಜಲಾಶಯಗಳಿಂದ ನೀರು ಹೊರಬಿಡುವ ಸಾಧ್ಯತೆ ಹೆಚ್ಚಿದ್ದು, ನೆರೆ ಪ್ರದೇಶದ ಜನರಿಗೆ ಸ್ಥಳದಿಂದ ಹೊರ ಹೋಗುವಂತೆ ಸೂಚಿಸಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಗರಬಸ್ತಿಕೇರಿ, ಉಪೋಣಿ, ಹೆರಂಗಡಿ ಹಾಗೂ ಜಲವಳಿ ಪಂಚಾಯತಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಅಲ್ಲಿ…

ಹಳ್ಳಕ್ಕೆ ಬಿದ್ದ ರೈತ ಸಾವು

ಶಿರಸಿ: ಗದ್ದೆಗೆ ಹೋಗಿದ್ದ ರಾಜೇಶ ಗಣಪತಿ ನಾಯ್ಕ (38) ಹಳ್ಳದಲ್ಲಿ ಬಿದ್ದು ಸಾವನಪ್ಪಿದ್ದಾರೆ. ತಾರಗೋಡು ಬಳಿಯ ಸದಾಶಿವಳ್ಳಿ ಗುಡೆಕೊಪ್ಪದ ರಾಜೇಶ ನಾಯ್ಕ ಜುಲೈ 28ರಂದು ಕೃಷಿ ಚಟುವಟಿಕೆ ನಡೆಸಲು ತಮ್ಮ ಗದ್ದೆಗೆ ತೆರಳಿದ್ದರು. ಭತ್ತದ ನಾಟಿಗೆ ತಯಾರಿ ಮಾಡುತ್ತಿದ್ದ ವೇಳೆ ಅವರು…

ಅರಣ್ಯ ಅತಿಕ್ರಮಣ ವಿಷಯದಲ್ಲಿ ಗೊಂದಲ: ಆತಂಕ ಬೇಡ ಎಂದ ಹೋರಾಟಗಾರ

ಶಿರಸಿ: `ಅರಣ್ಯ ಭೂಮಿ ಹಕ್ಕು ಕಾಯಿದೆಗೆ ತಿದ್ದುಪಡಿ ವಿಷಯವಾಗಿ ವಿಧಾನ ಮಂಡಲ ಸದನ ಇತ್ತೀಚೆಗೆ ತೆಗೆದುಕೊಂಡ ನಿರ್ಣಯಗಳು ಗೊಂದಲಕ್ಕೆ ಕಾರಣವಾಗಿದ್ದು, ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದರಿಂದ ಭೂಮಿ ಹಕ್ಕಿನ ಕಾಯಿದೆಗೆ ತಿದ್ದುಪಡಿ ಅಗತ್ಯವಿಲ್ಲ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ…

ಶ್ರೀಗಳ ದರ್ಶನ ಪಡೆದ ಶಾಸಕ

ಭಟ್ಕಳ: ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ನಡೆಸುತ್ತಿದ್ದಾರೆ. ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. `ಜನರಲ್ಲಿ ಧಾರ್ಮಿಕ…

ಯೋಗ ಶಿಕ್ಷಕನಿಗೆ ಒಲಿದ ಚಿನ್ನದ ಪದಕ

ಯಲ್ಲಾಪುರ: ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹುಟಕಮನೆ ಶಾಲೆಯ ಶಿಕ್ಷಕ ಸುಬ್ರಾಯ ಭಟ್ ಚಿನ್ನದ ಪದಕ ಪಡೆದಿದ್ದಾರೆ. ಯೋಗ ಪೆಡರೇಶನ್ ಆಫ್ ಇಂಡಿಯಾದವರು ಈ ಸ್ಪರ್ಧೆ ಆಯೋಜಿಸಿದ್ದರು. 50-60 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಅವರು ಈ ಬಹುಮಾನ ಪಡೆದಿದ್ದಾರೆ. ಸುಬ್ರಾಯ…

ರಸ್ತೆ ಮೇಲೆ ಬಿದ್ದ ವಿದ್ಯುತ್ ಕಂಬ

ಕುಮಟಾ: ರಭಸ ಗಾಳಿ – ಧಾರಾಕಾರ ಮಳೆ ಪರಿಣಾಮ ಹನೇಹಳ್ಳಿಯಲ್ಲಿ ರಸ್ತೆ ಮೇಲೆ ವಿದ್ಯುತ್ ಕಂಬ ಮುರಿದಿದೆ. ಇಲ್ಲಿನ ಶ್ರೀನಿವಾಸ ನಾಯಕ ಅವರ ಕಪೌಂಡ್ ಪಕ್ಕ ಮೂರು ಕಂಬ ಮುರಿದಿದೆ. ಇದರಿಂದ 15ಕ್ಕೂ ಅಧಿಕ ಮನೆಗಳ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಸ್ಥಳಕ್ಕೆ…

`ಕಾಲದ ಭಾಷೆ ಅರ್ಥ ಮಾಡಿಕೊಂಡರೆ ಬದುಕು ಸುಲಲಿತ’

ಕುಮಟಾ: `ಕಾಲದ ಭಾಷೆಯನ್ನು ಅರ್ಥ ಮಾಡಿಕೊಂಡರೆ ಬದುಕು ಸುಲಲಿತ’ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯ ಚಾತುರ್ಮಾಸ್ಯದಲ್ಲಿರುವ ಅವರು ಆಶೀರ್ವಚನ ನೀಡಿದ ಅವರು `ಕಾಲವನ್ನು ಮೀರಬೇಕಾದರೆ ಅದರ ಪರಿಭಾಷೆ ಅರ್ಥ ಮಾಡಿಕೊಳ್ಳಬೇಕು. ಗ್ರಹ, ರಾಶಿ,…

`ದೇವನಾಮ ಸ್ಮರಣೆಯಿಂದ ಸಮಸ್ಯೆ ಪರಿಹಾರ’

ಶಿರಸಿ: `ದೇವರನ್ನು ನಂಬಿ ಸ್ಮರಣೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳಿಂದ ಪಾರಾಗಲೂ ಸಾಧ್ಯ’ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಸ್ವರ್ಣವಲ್ಲೀ ಮಠದಲ್ಲಿ ತಮ್ಮ 34ನೇ ಹಾಗೂ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇoದ್ರ ಸರಸ್ವತೀ ಸ್ವಾಮೀಜಿಗಳ ಪ್ರಥಮ…

ಶಿಕ್ಷಕನ ಅಳಿಯ ನಾಪತ್ತೆ: ತೋಟಕ್ಕೆ ಹೋದವ ನಿಗೂಢ ಕಣ್ಮರೆ

ಹೊನ್ನಾವರ: ಮೂಡ್ಕಣಿಯ ಪ್ರೌಢಶಾಲೆ ಶಿಕ್ಷಕ ಸುಬ್ರಾಯ ಗೌಡ ಅವರ ಅಳಿಯ ಮಂಜುನಾಥ ನಾಗಪ್ಪ ಗೌಡ (29 ವರ್ಷ) ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಮರಳಿಲ್ಲ. ಹೊನ್ನಾವರದ ಗದ್ದೆಮನೆಯಲ್ಲಿ ವಾಸವಾಗಿದ್ದ ಮಂಜುನಾಥ ಗೌಡ ಜುಲೈ 27ರ ಮಧ್ಯಾಹ್ನ 12.30ಕ್ಕೆ ತೋಟಕ್ಕೆ…

ಗಾಂಜಾ ಸೇವನೆ: ಫೋಟೋಗ್ರಾಫರ್ – ಪೇಂಟರ್ ಜೊತೆ ಗುತ್ತಿಗೆದಾರನಿಗೂ ಜೈಲೂಟ!

ಹಳಿಯಾಳ: ಅಂಚೆ ಕಚೇರಿ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರು ಗಾಂಜಾ ಸೇವಿಸಿರುವುದು ದೃಢವಾಗಿದೆ. ಈ ಹಿನ್ನಲೆ ಒಂದೇ ಮನೆಯ ಇಬ್ಬರನ್ನು ಸೇರಿ ಒಟ್ಟು ಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನೆಗುಂದಿಯ ಫೋಟೋಗ್ರಾಫರ್ ಸಮರ್ಥ ಶಂಕರ್…

You cannot copy content of this page