ಬಸ್ ಹಾಗೂ ಲಾರಿ ನಡುವೆ ಅಪಘಾತ: ಘಟನಾ ಸ್ಥಳಕ್ಕೆ ಎಸ್.ಪಿ ಭೇಟಿ
ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಬಳಿ ಬಸ್ ಹಾಗೂ ಲಾರಿ ನಡುವೆ ಅಪಘಾತವಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್ ಭೇಟಿ ನೀಡಿದರು. ಘಟನಾ ಸ್ಥಳ ಪರಿಶೀಲಿಸಿದ ಅವರು, ಅಪಘಾತದ ಕುರಿತು ಅಧಿಕಾರಿಗಳಿಂದ ವಿವರ ಪಡೆದರು. ಯಲ್ಲಾಪುರ ಸಿಪಿಐ ರಮೇಶ ಹಾನಾಪುರ…
ಹುತ್ಕಂಡದಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ
ಯಲ್ಲಾಪುರ ತಾಲೂಕಿನ ಹುತ್ಕಂಡ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಕಲಾ ಬಳಗದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಕಾರ್ಯಕ್ರಮ ಉದ್ಘಾಟಿಸಿದರು. ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ…
ನಿಂತಿದ್ದ ಲಾರಿಗೆ ಗುದ್ದಿದ ಬಸ್: ಮೂವರ ಸಾವು, 7 ಜನರಿಗೆ ಗಾಯ
ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, 7 ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಬಳಿ ನಡೆದಿದೆ. ಬಾಗಲಕೋಟೆಯ ಗುಳೇದಗುಡ್ಡದ ನೀಲವ್ವ ಯಲದುರ್ಗಪ್ಪ ಹರದೊಳ್ಳಿ (40),…
ಕಂಪ್ಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ
ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತಿಯ ಆವಾರದಲ್ಲಿ 79 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಇದೇ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜರಾಜೇಶ್ವರಿ ಪ್ರೌಢಶಾಲೆಯ ವರ್ಷಾ ದಿಲೀಪ್ ರೊಖಡೆ,…
ನಾಗರಾಜ ಭಟ್ಟರ ಕೈಯಿಂದ ರಂಗೇರುವ ರಂಗೋಲಿ
ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದರಲ್ಲಿ ಆಸಕ್ತಿ, ಶ್ರದ್ಧೆ, ಪರಿಶ್ರಮ ಎಲ್ಲವೂ ಮೇಳೈಸಿದಾಗ ಮಾತ್ರ ಉತ್ತಮ ಕಲಾವಿದ ರೂಪುಗೊಳ್ಳಲು ಸಾಧ್ಯ. ಈ ಎಲ್ಲವನ್ನೂ ರೂಢಿಸಿಕೊಂಡು ರಂಗು ರಂಗಿನ ರಂಗೋಲಿಯ ಕಲೆಯಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ ಯಲ್ಲಾಪುರ ತಾಲೂಕಿನ ಕವಡಿಕೆರೆಯ ನಾಗರಾಜ ಸುಬ್ರಾಯ ಭಟ್ಟ…
ತವರಿಗೆ ಮರಳಿದ ಕಾಂಗ್ರೆಸ್: ಹೆಬ್ಬಾರ ಕೂಡ ಮರಳುವುದು ಫಿಕ್ಸ್?
ಯಲ್ಲಾಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಪ್ರಮುಖರಾದ ವಿಜಯ ಮರಾಶಿ, ರವಿ ಭಟ್ಟ ಬರಗದ್ದೆ, ಶಿರೀಷ ಪ್ರಭು, ಎಂ.ಡಿ.ಮುಲ್ಲಾ ಹಾಗೂ ಪಕ್ಷದ…
ಕಾಳಮ್ಮನಗರ ಕ್ರೀಡಾಂಗಣದಲ್ಲಿ ಧ್ವಜಾರೋಹಣ
ಯಲ್ಲಾಪುರದ ಕಾಳಮ್ಮಾನಗರ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 79ನೇಯ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣವನ್ನು ತಹಶಿಲ್ದಾರ ಚಂದ್ರಶೇಖರ ಹೊಸ್ಮನಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಎಲ್ಲರಿಗೂ ಮೂಲಭೂತ ಹಕ್ಕುಗಳಿದ್ದು, ನಮ್ಮ ಹಕ್ಕಿನ ಬಳಕೆ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಎಲ್ಲರೂ ಶಾಂತಿ ಸಾಮರಸ್ಯದಲ್ಲಿ ಬದುಕಬೇಕು.…
ಮೂತ್ರ ವಿಸರ್ಜನೆ ಬಂದ್!
ಪೇಟೆಗೆ ಹೋಗುವ ಮೊದಲು ಹತ್ತು ಬಾರಿ ತಲೆ ಕೆಡಿಸಿಕೊಳ್ಳಬೇಕಿದೆ. ಮೂತ್ರ ವಿಸರ್ಜನೆ ಮಾಡುವುದೇ ದೊಡ್ಡ ಸಮಸ್ಯೆ.ಬಿಡ್ರಿ…ಅದೇನ್ ಮಹಾ ಉಚ್ಚಿ ಬಂದಾಗ ಖಾಲಿ ಮಾಡಿದ್ರಾಯ್ತು ಅಂತೀರಾ? ಉಂಹೂ…..ಅದಕ್ಕೆಲ್ಲಿದೆ ಅವಕಾಶ? ಬೆಳಿಗ್ಗೆ ಮನೆ ಬಿಟ್ಟರೆ ಸಂಜೆ ಮನೆಗೆ ಬಂದೇ ಮೂತ್ರ ವಿಸರ್ಜನೆ ಮಾಡಬೇಕು. ಕಾರಣ…
‘ರಾಷ್ಟ್ರನಮನ’: ದೇಶಭಕ್ತಿಗೀತೆ ರಚನೆ ಮತ್ತು ಗಾಯನ ಸ್ಪರ್ಧೆ
ಬೆಂಗಳೂರಿನ ಅಂತರಂಗ ಪ್ರತಿಷ್ಠಾನದಿಂದ ಪ್ರೇರಣಾ ಮಾಸದ ಸರಣಿ ಕಾರ್ಯಕ್ರಮವಾಗಿ ‘ರಾಷ್ಟ್ರ ನಮನ’ ದೇಶಭಕ್ತಿ ಗೀತೆ ರಚನೆ ಮತ್ತು ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಗೀತೆ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ ರೀತಿಯಲ್ಲಿ ನಕಲು ಮಾಡುವಂತಿಲ್ಲ. ಯಾವುದೇ ಗಾಯಕರಿಂದ ರಾಗ ಸಂಯೋಜನೆ ಮಾಡಿಸಿ, ಹಾಡಿಸಬಹುದು. ಹಾಡಿದ…
ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ : ದಾಳಿ ನಡೆಸಿದ ಪೊಲೀಸರಿಗೆ ಸಿಕ್ಕಿದ್ದು 330 ರೂಪಾಯಿ ಮೌಲ್ಯದ ಮದ್ಯ!
ಯಲ್ಲಾಪುರದ ನಾಯಕನಕೆರೆ ಹಾಗೂ ಹುಣಶೆಟ್ಟಿಕೊಪ್ಪದ ಬೆಳಕೊಪ್ಪದಲ್ಲಿ ಯಾವುದೇ ಅನುಮತಿ ಇಲ್ಲದೇ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಎರಡು ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 330 ರೂ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ನಾಯಕನಕೆರೆಯ ತನ್ನ ಫಾಸ್ಟ್ ಫುಡ್ ಅಂಗಡಿಯಲ್ಲಿ ಜನರಿಗೆ…
















