ಕವಲಗಿ ಹಳ್ಳದಲ್ಲಿ ಮುಳುಗಿದ ಸಹೋದರರು: ಒಬ್ಬ ಜೀವಂತ ಸಿಗಲಿಲ್ಲ, ಇನ್ನೊಬ್ಬ ಇನ್ನೂ ಸಿಗಲೇ ಇಲ್ಲ
ಮೀನು ಹಿಡಿಯಲು ಹೋಗಿ ಯಲ್ಲಾಪುರ ತಾಲೂಕಿನ ಕವಲಗಿ ಹಳ್ಳದಲ್ಲಿ ಮುಳುಗಿದ್ದ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಪತ್ತೆಯಾಗಿದ್ದಾನೆ. ದಿನವಿಡೀ ಹುಡುಕಿದರೂ ಇನ್ನೊಬ್ಬನ ಸುಳಿವು ಸಿಕ್ಕಿಲ್ಲ. ಮಹಮ್ಮದ್ ರಫೀಖ್ ಇಬ್ರಾಹಿಂ ಸಾಬ್ ಸೈಯದ್ (27) ಶವವಾಗಿ ಪತ್ತೆಯಾಗಿದ್ದಾರೆ. ಮಾದನಸರದ ಎಂಟು ಜನ ಕವಲಗಿ…
‘ಶ್ರೀ ನ್ಯೂಸ್’ ವರದಿಗೆ ಸ್ಪಂದಿಸಿದ ಆಡಳಿತ: ಕಸದ ರಾಶಿಗೆ ಮುಕ್ತಿ ನೀಡಿದ ಪಟ್ಟಣ ಪಂಚಾಯಿತಿ
ಯಲ್ಲಾಪುರದ ಮುಂಡಗೋಡ ರಸ್ತೆಯ ಪಕ್ಕ ಬಿ.ಎಸ್.ಎನ್.ಎಲ್ ವಸತಿಗೃಹ ಸಂಕೀರ್ಣದ ಎದುರು ವರ್ಷಗಳಿಂದ ಬಿದ್ದಿರುವ ಕಸದ ರಾಶಿಗೆ ಅಂತೂ ಮುಕ್ತಿ ಸಿಕ್ಕಿದೆ. ರಾಶಿ, ರಾಶಿ ಕಸ ಬಿದ್ದಿದ್ದು, ಕಸದ ರಾಶಿಯ ನಡುವೆಯೇ ಕಸದ ತೊಟ್ಟಿಯೊಂದು ಬಿದ್ದುಕೊಂಡಿತ್ತು. ನೋಡುವವರಿಗೆ ಅದೂ ಕಸವೇ ಇರಬಹುದೆಂಬ ಭಾವನೆ…
ಲಾರಿಗಳ ನಡುವೆ ಅಪಘಾತ: ಹೆದ್ದಾರಿಯಲ್ಲಿ ರಾಶಿಯಾದ ಸಿಮೆಂಟ್ ಚೀಲಗಳು
ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ. ಲಾರಿಯ ಚಾಲಕ ಬೆಳಗಾವಿಯ ಸವದತ್ತಿಯ ಪ್ರಕಾಶ ಮಹಾದೇವ ಶೆಟ್ಟಪ್ಪನವರ್ ಗಾಯಗೊಂಡ ವ್ಯಕ್ತಿ. ಯಲ್ಲಾಪುರ ಕಡೆಯಿಂದ ಅಂಕೋಲಾ…
ಹಳ್ಳದಲ್ಲಿ ಮುಳುಗಿದ ಸಹೋದರರು: ಬೆಳಗ್ಗೆ ಮುಂದುವರಿಯಲಿದೆ ಶೋಧ ಕಾರ್ಯ
ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿ ಸಮೀಪದ ಕವಲಗಿ ಹಳ್ಳದಲ್ಲಿ ಮುಳುಗಿದ ಸಹೋದರರ ಪತ್ತೆ ಕಾರ್ಯಾಚರಣೆಯನ್ನು ಪೊಲೀಸ್ ಹಾಗೂ ಅಗ್ನಿಶಾಮದ ದಳದವರು ಜಂಟಿಯಾಗಿ ಮಾಡುತ್ತಿದ್ದಾರೆ. ಘಟನೆ ಸಂಜೆ 6 ಗಂಟೆಯ ಹೊತ್ತಿಗೆ ನಡೆದಿದ್ದು, ಕಾಣೆಯಾದ ಸಹೋದರರ ಜತೆ ಬಂದಿದ್ದ ಅವರ ತಂದೆ ಹಾಗೂ ಇನ್ನುಳಿದವರು…
ನದಿಯಲ್ಲಿ ಮೀನು ಹಿಡಿಯಲು ಹೋದ ಸಹೋದರರು, ಹಳ್ಳದಲ್ಲಿ ಮುಳುಗಿ ಕಾಣೆಯಾದರು
ಬೇಡ್ತಿ ನದಿಯಲ್ಲಿ ಮೀನು ಹಿಡಿದು ಮರಳುವಾಗ ಸಹೋದರರಿಬ್ಬರು ಯಲ್ಲಾಪುರ ತಾಲೂಕಿನ ಕವಲಗಿಯ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದಾರೆ. ಮಾದನಸರದ ಮಹಮ್ಮದ್ ರಫೀಕ್ ಇಬ್ರಾಹಿಂ ಸಾಬ್ ಸೈಯ್ಯದ್ ಹಾಗೂ ಅವರ ತಮ್ಮ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯದ್ ಕಾಣೆಯಾದವರು. ಮಾದನಸರದ 8 ಮಂದಿ…
ಕಸವಾದ ಕಸದ ತೊಟ್ಟಿ
‘ಸ್ವಚ್ಛ ಭಾರತ, ಸ್ವಚ್ಛ ಭಾರತ’ ಎಂದು ದೊಡ್ಡದಾಗಿ ಹಾಡು ಹಚ್ಚಿಕೊಂಡು ಬರುವ ಯಲ್ಲಾಪುರದ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿಯ ಸಿಬ್ಬಂದಿಗೆ ರಸ್ತೆಯ ಪಕ್ಕದಲ್ಲೇ ವರ್ಷಗಳಿಂದ ಬಿದ್ದಿರುವ ಕಸದ ರಾಶಿ ಕಾಣದೇ ಇರುವುದು ವಿಚಿತ್ರ, ಆದರೂ ಸತ್ಯ. ಯಲ್ಲಾಪುರದ ಮುಂಡಗೋಡ ರಸ್ತೆಯ ಪಕ್ಕ…
ಸಾವಿಗೂ ಮುನ್ನವೇ ನರಕ ಅನುಭವಿಸಿದ್ದ ಕಲಾವಿದ!
ಇತ್ತೀಚೆಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಸಿದ್ದಿ ಅವರಿಗೆ ಕುಟುಂಬದವರೇ ಥಳಿಸಿದ ವಿಡಿಯೊ ಹೊರಬಿದ್ದಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂದ್ರಶೇಖರ್ ಸತ್ತು 10 ದಿನಗಳು ಕಳೆದ ನಂತರ, ಮೂರು ತಿಂಗಳಿನಷ್ಟು ಹಳೆಯದ್ದು ಎನ್ನಲಾದ ಈ ವಿಡಿಯೊ ಹರಿಯ…
ಮತಗಳ್ಳತನ ಆರೋಪ: ಕಾಂಗ್ರೆಸ್ ವಿರುದ್ಧವೂ ತನಿಖೆಯಾಗಲಿ: ರಾಮು ನಾಯ್ಕ ಆಗ್ರಹ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮತಕಳ್ಳತನವಾದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪ ಮಾಡಿ, ತನಿಖೆಗೆ ಆಗ್ರಹಿಸಿದ್ದಾರೆ. ಅದೇ ರೀತಿ 2023 ರ ವಿಧಾನ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಕ್ರಮ ಎಸಗಿರುವ ಸಂಭವವಿದ್ದು, ಅವರ ವಿರುದ್ಧವೂ ತನಿಖೆಯಾಗಬೇಕು ಎಂದು ಬಿಜೆಪಿ…
ಬೆಲ್ತರಗದ್ದೆ ಮಹಿಳೆ ಸಾವಿಗೆ ಕುಟುಂಬ ಕಲಹ ಕಾರಣ
ಯಲ್ಲಾಪುರ ತಾಲೂಕಿನ ಆನಗೋಡಿನ ಬೆಲ್ತರಗದ್ದೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಲಕ್ಷ್ಮೀ ಸಿದ್ದಿ ಅವರ ಮನೆಗೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯವರು ಭೇಟಿ ನೀಡಿದರು. ಮೃತ ಲಕ್ಷ್ಮೀ ಸಿದ್ದಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ,…
ಬೆಲ್ತರಗದ್ದೆಯಲ್ಲಿ ಮಹಿಳೆ ಸಾವು ಹಸಿವಿನಿಂದಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
ಯಲ್ಲಾಪುರ ತಾಲೂಕಿನ ಆನಗೋಡ ಬೆಲ್ತರಗದ್ದೆಯಲ್ಲಿ ಲಕ್ಷ್ಮೀ ಸಿದ್ದಿ ವೈಯಕ್ತಿಕವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾರೆ ಹೊರತು, ಹಸಿವಿನ ಕಾರಣದಿಂದಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಸ್ಪಷ್ಟಪಡಿಸಿದ್ದಾರೆ. ಕಳೆದ ಆ.2 ರಂದು ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದ ಲಕ್ಷ್ಮೀ ಸಿದ್ದಿ, ಹುಬ್ಬಳ್ಳಿಯ ಕಿಮ್ಸ್…















