ಹಸಿವಿನಿಂದ ಮಹಿಳೆ ಸಾವು, ರಾಜ್ಯ ಸರ್ಕಾರ ತಲೆತಗ್ಗಿಸುವ ಸಂಗತಿ: ಎಂ.ಎಲ್.ಸಿ ಶಾಂತಾರಾಮ ಸಿದ್ದಿ ಆಕ್ರೋಶ
ಯಲ್ಲಾಪುರ ತಾಲೂಕಿನ ಆನಗೋಡಿನ ಬೆಲ್ತರಗದ್ದೆಯಲ್ಲಿ ಸಿದ್ದಿ ಸಮುದಾಯದ ಮಹಿಳೆ ಹಸಿವಿನಿಂದ ಬಳಲಿ, ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವುದು ರಾಜ್ಯ ಸರ್ಕಾರ ತಲೆತಗ್ಗಿಸುವ ಘಟನೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದ್ದಾರೆ. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆ ಹಸಿವಿನಿಂದ ಸತ್ತಿದ್ದಾರೆಂದು…
ತುಳಸಿ ಎಲೆಗಳ ಮೇಲೆ ಶ್ರೀಕೃಷ್ಣ!
ಯಲ್ಲಾಪುರ ತಾಲೂಕಿನ ತೇಲಂಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಪರೂಪದ ಕಲೆಯ ಮೂಲಕ ಗಮನ ಸೆಳೆದಿದ್ದಾಳೆ. ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಮಾನಸಾ ರಾಘವೇಂದ್ರ ಗಾಂವ್ಕರ ತುಳಸಿ ಎಲೆಗಳ ಮೇಲೆ ಕೃಷ್ಣನ ಚಿತ್ರವನ್ನು ಸುಂದರವಾಗಿ ಬಿಡಿಸಿದ್ದಾಳೆ. ಚಿಕ್ಕದಾಗಿರುವ ತುಳಸಿ ಎಲೆಗಳ…
ಶಾಲೆಗೆ ಬಂದ ಬಳೆಗಾರ
ಸರಿಯಾಗಿ ಪಾಠ ಕಲಿಯಲಿಲ್ಲವೆಂದು ಮುಂಡಗೋಡಿನಲ್ಲಿ ವಿದ್ಯಾರ್ಥಿಗೆ ಶಿಕ್ಷಕಿ ಥಳಿಸಿರುವ ಘಟನೆ ನಿನ್ನೆಯಷ್ಟೇ ನಡೆದಿದೆ. ಅಲ್ಲಲ್ಲಿ ಇಂತಹ ಘಟನೆಗಳು ನಡೆಯುವ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಕ್ರಿಯಾಶೀಲತೆ, ಹೊಸ ಚಿಂತನೆಗಳಿಂದ ಪಾಠ ಮಾಡಿದರೆ, ಮಕ್ಕಳು ಆಸಕ್ತಿಯಿಂದ ಕಲಿಯುವ ಹಾಗೆ ಮಾಡಬಹುದು. ಯಾವ ಶಿಕ್ಷೆಯಿಲ್ಲದೇ…
ನಾಲ್ಕು ವರ್ಷಗಳ ನಂತರ ಹೆಗ್ಗಾರಿಗೆ ಬಸ್ ಬಂತು!
ಯಲ್ಲಾಪುರ ಬಸ್ ಘಟಕದಿಂದ ಹೆಗ್ಗಾರ ಭಾಗಕ್ಕೆ ಬಸ್ ಓಡಾಟ ನಾಲ್ಕು ವರ್ಷಗಳ ನಂತರ ಪುನರಾರಂಭಗೊಂಡಿದೆ. ನಾಲ್ಕು ವರ್ಷಗಳ ಹಿಂದೆ ಗುಳ್ಳಾಪುರದ ಸೇತುವೆ ಕುಸಿದ ನಂತರ ಈ ಭಾಗಕ್ಕೆ ಬಸ್ ಓಡಾಟ ನಿಂತಿತ್ತು. ರಾಮನಗುಳಿ ಸೇತುವೆ ಆದ ನಂತರ ಜನಾಗ್ರಹಕ್ಕೆ ಮಣಿದು ಕಮ್ಮಾಣಿಗೆ…
ಆತ್ಮವಿಶ್ವಾಸವೇ ಯಶಸ್ಸಿನ ಹೆಬ್ಬಾಗಿಲು
ಪರೀಕ್ಷೆಗಳು ಎಂದರೆ ಕೇವಲ ಜ್ಞಾನದ ಪರೀಕ್ಷೆ ಮಾತ್ರವಲ್ಲ ಬದಲಿಗೆ ಅವು ಸ್ಪರ್ಧಾರ್ಥಿಗಳ ತಾಳ್ಮೆ, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದ ಪರೀಕ್ಷೆ ಕೂಡ ಹೌದು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲಕ್ಷಾಂತರ ಅಭ್ಯರ್ಥಿಗಳ ನಡುವೆ ಸ್ಪರ್ಧಿಸಿ ಯಶಸ್ಸು ಗಳಿಸಬೇಕೆಂದರೆ ಸಂಬಂಧಿಸಿದ ವಿಷಯ ಜ್ಞಾನದ ಜೊತೆಗೆ ಅಭ್ಯರ್ಥಿಗಳಿಗೆ…
ಆನೆ ಬಂತೊಂದಾನೆ…
ಯಲ್ಲಾಪುರ ತಾಲೂಕಿನ ಮಂಚಿಕೇರಿ ಸುತ್ತಮುತ್ತ ತೋಟಗಳಲ್ಲಿ ಆನೆಯೊಂದು ಓಡಾಟ, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಎರಡು ದಿನಗಳ ಹಿಂದೆ ಮಂಚಿಕೇರಿ ಸಮೀಪದ ಕೊಕ್ಕಾರ ಭಾಗದಲ್ಲಿ ಆನೆ ಓಡಾಡಿದೆ. ಕೊಕ್ಕಾರ ಹಾಗೂ ಸುತ್ತಲಿನ ಕೆಲ ಅಡಕೆ ತೋಟಗಳಲ್ಲಿ ಆನೆ ನಡೆದು ಹೋಗಿದೆ. ಆದರೆ…
ರೇಖಾ ನಾಯ್ಕ ಯಲ್ಲಾಪುರದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ
ಕಳೆದ 8 ವರ್ಷಗಳಿಂದ ಯಲ್ಲಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಎನ್.ಆರ್.ಹೆಗಡೆ ಅವರನ್ನು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಇಲಾಖೆಯ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು. ಕುಮಟಾದ ಡಯಟ್ ನ ಉಪನಿರ್ದೇಶಕರಾಗಿ ಬಡ್ತಿ ಹೊಂದಿದ ಎನ್.ಆರ್.ಹೆಗಡೆ ಅವರನ್ನು ಶಿಕ್ಷಕರು, ಇಲಾಖೆಯ…
ಬೈಕ್ ಸವಾರನ ಮೇಲೆ ಎಗರಿದ ಚಿರತೆ
ಬೈಕ್ ಸವಾರನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ನಡೆದಿದೆ. ಡೊಂಬೇಕೈ ನಿವಾಸಿ ಸುವೇಕ ಶಿವಾನಂದ ಗೌಡ ಗಾಯಗೊಂಡ ವ್ಯಕ್ತಿ. ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಭುವನಗಿರಿ ಬಳಿ ಚಿರತೆಯೊಂದು ಬೈಕ್ ಮೇಲೆ ಎರಗಿದ್ದು ಸವಾರನ…
ಟಿಎಂಎಸ್ ನಿಂದ ವಿ.ಟಿ.ಹೆಗಡೆ ಅವರಿಗೆ ಗೌರವದ ಬೀಳ್ಕೊಡುಗೆ
ಯಲ್ಲಾಪುರದ ತಾಲೂಕು ಮಾರ್ಕೆಟಿಂಗ್ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಲ್ಲಿ 35 ವರ್ಷಗಳಿಂದ ಕಾರ್ಯನಿರ್ವಹಿಸಿ, ಮುಖ್ಯ ಕಾರ್ಯನಿರ್ವಾಹಕರಾಗಿ ನಿವೃತ್ತರಾದ ವಿ.ಟಿ.ಹೆಗಡೆ ತೊಂಡೆಕೆರೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಬೀಳ್ಕೊಡಲಾಯಿತು. ನಿವೃತ್ತರಾದ ವಿ.ಟಿ.ಹೆಗಡೆ ಅವರು ಸ್ವರ್ಣವಲ್ಲೀ ಮಠದ ಅಂಗ ಸಂಸ್ಥೆಯಾದ ಕರಡೊಳ್ಳಿಯ ಗೋವರ್ಧನ ಗೋಶಾಲೆಗೆ ನಿಧಿ…
ವಿಘ್ನನಿವಾರಕನ ಪೂಜೆಗೆ ಸರ್ಕಾರದಿಂದ ವಿಘ್ನ: ರಾಮು ನಾಯ್ಕ ಆಕ್ರೋಶ
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ, ಬಿಜೆಪಿ ಮುಖಂಡ ರಾಮು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಗಣೇಶ ಹಬ್ಬವನ್ನು ನಿಮ್ಮ ಪುರಾತನ ಪದ್ಧತಿಯಂತೆ ಆಚರಿಸುವುದನ್ನು ಬಿಡಿ, ಆಚರಿಸುವದಿದ್ದರೆ ಪರಿಸರ…
















