6
ಪ ಪಂ ಅಧಿಕಾರಿಗಳ ಪೆನ್ ಡ್ರೈವ್ ರಹಸ್ಯ: ಸಿಬ್ಬಂದಿ ಸತ್ಯ ಹೇಳಲಿಲ್ಲ.. ಸದಸ್ಯರು ಪಟ್ಟು ಬಿಡಲಿಲ್ಲ!

ಯಲ್ಲಾಪುರ ಗ್ರಾಮದೇವಿ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿಯೂ ಚರ್ಚೆ ನಡೆದಿದದ್ದು, ಅನೇಕರ ನಡುವೆ ವಾಗ್ವಾದ-ಜಟಾಪಟಿ, ರಾಜಕೀಯ ಕಚ್ಚಾಟಕ್ಕೆ ಈ ಸಭೆಯೂ ಸೀಮಿತಗೊಂಡಿತು. ಪಟ್ಟಣದ ಮೀನು ಮಾರುಕಟ್ಟೆ ವಿಷಯವಾಗಿ ಸದಸ್ಯ ಸತೀಶ ನಾಯ್ಕ ಹಾಗೂ…

ಉತ್ತರ ಕನ್ನಡ | ಅಲ್ಲಲ್ಲಿ ಗುಡ್ಡ ಕುಸಿತ.. ಜನ ಜೀವನ ಅಸ್ತವ್ಯಸ್ಥ: ಕರಾವಳಿ ತೀರದಲ್ಲಿ ಮಾಯದಂತ ಮಳೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಕೊಂಚವೂ ಬಿಡುವು ನೀಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗುವುದು, ರಸ್ತೆ ಮುಳುಗಡೆ ಸಾಮಾನ್ಯವಾಗಿದೆ. ನಿರಂತರವಾದ ಗಾಳಿ-ಮಳೆ-ಚಳಿಗೆ ಜನ ತತ್ತರಿಸಿದ್ದಾರೆ. ಕಾರವಾರ ಪ್ರವೇಶಿಸುವ…

ಪ್ರವಾಸಿಗರ ಆಗಮನ: ಗುಡ್ಡೆಹಳ್ಳಿಯಲ್ಲಿ ಗೌಡರ ಜಗಳ!

ಕಾರವಾರದ ಗುಡ್ಡೆಹಳ್ಳಿಗೆ ಪ್ರವಾಸಿಗರು ಬರುವ ವಿಷಯವಾಗಿ ಕೃಷ್ಣ ಗೌಡ, ತಾಕು ಗೌಡ ಹಾಗೂ ಅಜೀಪ ಗೌಡ ನಡುವೆ ಜಗಳವಾಗಿದೆ. ಅವರೆಲ್ಲರ ಕೈಯಲ್ಲಿ ಕತ್ತಿ ಹಿಡಿದು ಜೀವಬೆದರಿಕೆ ಒಡ್ಡುವಷ್ಟರ ಮಟ್ಟಿಗೆ ಕಚ್ಚಾಟ ನಡೆಸಿದ್ದಾರೆ. ಕಾರವಾರದ ಬಿಣಗಾ ವ್ಯಾಪ್ತಿಯಲ್ಲಿ ಬರುವ ಗುಡ್ಡೆಹಳ್ಳಿ ಮೂಲಭೂತ ಸೌಕರ್ಯ…

ಕುಮಟಾ: ಕಾರ್ವಿಂಗ್ ಕೆಲಸದವನಿಗೆ ಕಪಾಳಮೋಕ್ಷ!

ಕುಮಟಾದ ಸಂದೀಪ ಮಾಶಲೇಕರ್ ಹಾಗೂ ದತ್ತಾತ್ರೇಯ ನಾಯ್ಕ ಅವರ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಮೂಗು ತೂರಿಸಿದ ಸುಬ್ರಹ್ಮಣ್ಯ ಉಡದಂಗಿ ವಿರುದ್ಧವೂ ಸಂದೀಪ ಮಾಶಲೇಕರ್ ದೂರು ನೀಡಿದ್ದಾರೆ. ಕುಮಟಾದ ದೇವರಹಕ್ಕಲದಲ್ಲಿ ಸಂದೀಪ ಮಾಶಲೇಕರ್ ಕಾರ್ವಿಂಗ್ ಕೆಲಸ ಮಾಡಿಕೊಂಡಿದ್ದರು. ಜ 11ರಂದು…

ಮರದಿಂದ ಬಿದ್ದ ಕೊನೆಗೌಡ: ಎರಡು ವಾರದ ಬಳಿಕ ಕೊನೆಯುಸಿರು!

ಶಿರಸಿಯ ಶ್ರೀಪಾದ ಹೆಗಡೆ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೊನೆಗೌಡ ವಿನಾಯಕ ಗೌಡ ಮರದಿಂದ ಬಿದ್ದು ಎರಡು ವಾರ ಆಸ್ಪತ್ರೆಯಲ್ಲಿ ನರಳಾಡಿ ಸಾವನಪ್ಪಿದ್ದಾರೆ. ಶಿರಸಿ ಅಜ್ಜಿಬಾಳ ಬಳಿಯ ಬಾಳೆಗದ್ದೆಯ ವಿನಾಯಕ ಗೌಡ (48) ಅವರು ಪತ್ನಿ ರೂಪಾ ಗೌಡ ಅವರ…

ಹೆಣ್ಣು ಹುಟ್ಟಿದ ಕಾರಣ ವೇದನೆ.. ಹಿಂಸೆ: ಗಂಡನ ಕಿರುಕುಳಕ್ಕೆ ಬೇಸತ್ತು ಕಳೆನಾಶಕ ಸೇವಿಸಿದ ಮಹಿಳೆ ಇನ್ನಿಲ್ಲ!

33 ವರ್ಷದೊಳಗೆ 5 ಹೆಣ್ಣು ಮಕ್ಕಳನ್ನು ಹಡೆದಿದ್ದ ಯಲ್ಲಾಪುರದ ಪೂಜಾ ಮೊಹತೆ ಅವರು ಪತಿ ಸುನೀಲ ಮೊಹತೆ ಅವರ ಕಿರುಕುಳಕ್ಕೆ ಬೇಸತ್ತು ಕಳೆನಾಶಕ ಸೇವಿಸಿದ್ದು, ತವರುಮನೆಯವರು ಪೂಜಾ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಲ್ಲಾಪುರದ ಸಬಗೇರಿ ಬಳಿಯ…

ಜೂನ್ 13: ಶಾಲೆ ಮಾತ್ರ ರಜೆ.. ಕಾಲೇಜಿಗೆ ಇಲ್ಲ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 17ರವರೆಗೆ ರೆಡ್ ಅಲರ್ಟ ಘೋಷಿಸಲಾಗಿದೆ. ಈ ಹಿನ್ನಲೆ ಕರಾವಳಿ ಭಾಗದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಸದ್ಯದ ಆದೇಶದ ಪ್ರಕಾರ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಈ…

ಈ ಸತ್ಯ ವಿಚಿತ್ರ: ಧಾರಾಕಾರ ಮಳೆಗೆ ಕೊಟ್ಟಿಗೆ ಭಸ್ಮ!

ಭಟ್ಕಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿಗೆ ಕೊಟ್ಟೆಗೆಯೊಂದು ಬೆಂಕಿಗೆ ಆಹುತಿಯಾಗಿದೆ. ತಾಲೂಕಿನಲ್ಲಿ ಗುಡುಗುಸಹಿತ ಮಳೆಯಾಗುತ್ತಿದ್ದು, ಸಿಡಿಲಿನ ಅಬ್ಬರಕ್ಕೆ ಕೊಟ್ಟಿಗೆ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಬುಧವಾರ ರಾತ್ರಿಯಿಡಿ ಭಟ್ಕಳ ಹಾಗೂ ಸುತ್ತಲಿನ ಭಾಗದಲ್ಲಿ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದಿದ್ದು, ಬೆಳಕೆ ಕಟಗೇರಿಯಲ್ಲಿನ ಜಾನುವಾರು…

ನಿರೀಕ್ಷೆಗೂ ಮೀರಿದ ಅವಾಂತರ: ಮಳೆಯಲ್ಲಿ ಮುಳುಗಿದ ಕಾರವಾರ!

ಕರಾವಳಿ ಭಾಗದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು. ಆದರೆ, ಈ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂದು ಯಾರು ಊಹಿಸಿರಲಿಲ್ಲ. ಗುರುವಾರ ಸುರಿದ ಮಳೆಗೆ ಜಿಲ್ಲಾಕೇಂದ್ರದಲ್ಲಿನ ವಿವಿಧ ಸರ್ಕಾರಿ ಕಚೇರಿಗಳಿಗೂ ನೀರು ನುಗ್ಗಿದ್ದು, ಅನೇಕರ ಮನೆಯ ಪೀಠೋಪಕರಣಗಳು ಹಾಳಾದವು. ಸಾರ್ವಜನಿಕ ಓಡಾಟದ…

ಮಾಧ್ಯಮ ಶಕ್ತಿ.. ವರದಿಯ ಫಲಶೃತಿ: ಆರು ವರ್ಷದ ಸಮಸ್ಯೆಗೆ ಮೂರೇ ದಿನದಲ್ಲಿ ಪರಿಹಾರ!

ಸರ್ಕಾರಿ ಶಾಲೆಗೆ ಅಪಾಯಕಾರಿ ರೀತಿಯಲ್ಲಿ ಮರದ ಕಂಬ ಬಳಸಿ ವಿದ್ಯುತ್ ಪೂರೈಸುತ್ತಿರುವ ಬಗ್ಗೆ ಜೂ 10ರ ಮಂಗಳವಾರ ವರದಿ ಪ್ರಕಟವಾಗಿದ್ದು, ಜೂ 12ರ ಗುರುವಾರ ಅಲ್ಲಿ ಸಿಮೆಂಟ್ ಕಂಬ ಅಳವಡಿಸಲಾಗಿದೆ. ಇದಕ್ಕೆ ಕಾರಣ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ, ಶಾಸಕ…

You cannot copy content of this page