ದರೋಡೆ ಮಾಡಿದ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ–ದಂಡ
ಹಾವೇರಿ–ರಾಣೇಬೆನ್ನೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಡ್ಸ್ ವಾಹನ ನಿಲ್ಲಿಸಿ, ವಾಹನದಲ್ಲಿದ್ದವರ ಮೇಲೆ ಹಲ್ಲೆ ಮಾಡಿ ಅವರ ಬಳಿಯ ಮೊಬೈಲ್ ಫೋನ್ ಹಾಗೂ ಹಣ ಕಿತ್ತುಕೊಂಡು ದರೋಡೆ ಮಾಡಿದ ಮೂವರು ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ರೂ.10 ಸಾವಿರ ದಂಡ…
ಶಾಲಾ-ಕಾಲೇಜು ಸಮಯಕ್ಕೆ ಬಾರದ ಬಸ್: ಹೆಚ್ಚುವರಿ ಬಸ್‌ಗೆ ಆಗ್ರಹಿಸಿ ದೇವಗಿರಿಯಲ್ಲಿ ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ
ಹಾವೇರಿ: ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಓಡಿಸಬೇಕು ಹಾಗೂ ದೇವಗಿರಿ ಗ್ರಾಮಕ್ಕೆ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ತಡವಾಗಿ ಬಂದ ಬಸ್‌ಗಳನ್ನು ತಡೆದು ಧಿಡೀರ್ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಹೋರಾಟಕ್ಕೆ ಎಸ್‌ಎಫ್‌ಐ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.…
ಗುರುರಾಯಪಟ್ಟಣದ 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ: ಹಕ್ಕುಪತ್ರ ವಿತರಿಸಿದ ಶಾಸಕ ಮಾನೆ ಶ್ರೀನಿವಾಸ
ಹಾನಗಲ್: ಹಲವು ದಶಕಗಳಿಂದ ಮನೆ ಮಾಲಿಕತ್ವದ ಹಕ್ಕಿಲ್ಲದೆ ಆತಂಕದಲ್ಲಿದ್ದ ಗುರುರಾಯಪಟ್ಟಣ ಗ್ರಾಮದ 150 ಕುಟುಂಬಗಳಿಗೆ ಇದೀಗ ಹೊಸ ಬೆಳಕು ಮೂಡಿದೆ. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಮಾನೆ ಶ್ರೀನಿವಾಸ ಅವರು 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಹಕ್ಕುಪತ್ರಗಳನ್ನು…
ದಶಕಗಳ ಕಾಯುವಿಕೆಗೆ ತೆರೆ: ಗುರುರಾಯಪಟ್ಟಣದ 150 ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವ!
ಹಾನಗಲ್: ಹಲವು ದಶಕಗಳಿಂದ ಸ್ವಂತ ಮನೆಯ ಮಾಲಿಕತ್ವದ ದಾಖಲೆಗಳಿಗಾಗಿ ಕಾಯುತ್ತಿದ್ದ ಗುರುರಾಯಪಟ್ಟಣ ಗ್ರಾಮದ 150 ಕುಟುಂಬಗಳಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಮನೆ ಮಾಲಿಕತ್ವದ ಶಾಶ್ವತ ಹಕ್ಕನ್ನು ಕಲ್ಪಿಸುವ ನಿಟ್ಟಿನಲ್ಲಿ 150 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ…
25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು
ರಾಣೆಬೆನ್ನೂರು: ತಾಲೂಕಿನ ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 70ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರನ್ನು 2001ರಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ತೆಗೆದುಹಾಕಲಾಗಿದೆ. ಕಳೆದ 25 ವರ್ಷಗಳಿಂದ ನ್ಯಾಯ ಹಾಗೂ ಪರಿಹಾರಕ್ಕಾಗಿ ಬೆಳಗಾವಿ, ಹುಬ್ಬಳ್ಳಿ ಮತ್ತು ಹಾವೇರಿ ಕಾರ್ಮಿಕರ ಕೋರ್ಟ್‌ಗಳಿಗೆ ಅಲೆದಾಡುತ್ತಿರುವ ಈ ಕಾರ್ಮಿಕರ…
ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ
ಹಾನಗಲ್ಲ: ಮಂದಿರಗಳು ಸಾಮರಸ್ಯದ ಕೇಂದ್ರಗಳಾಗಿ ಮೌಢ್ಯವನ್ನು ದೂರ ಮಾಡುವ ಭಕ್ತಿ ಸ್ಥಾನಗಳಾದರೆ ಮಾತ್ರ ಅವು ಸಮಾಜಕ್ಕೆ ಸಾರ್ಥಕತೆ ನೀಡಬಲ್ಲವು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ನುಡಿದರು. ಪಟ್ಟಣದಲ್ಲಿ ಗ್ರಾಮದೇವಿ ಶಿಲಾಮಂದಿರ ಉದ್ಘಾಟನೆ ನಿಮಿತ್ತ ಏರ್ಪಡಿಸಿದ್ದ ಧರ್ಮ ಸಭೆಯ…
ದೇಗುಲದಲ್ಲಿ ಮೂತ್ರ ವಿಸರ್ಜನೆ; ಶಿಗ್ಗಾಂವ ಬಂದ್‌ಗೆ ವ್ಯಾಪಾರಸ್ಥರ ಬೆಂಬಲ
ಹಾವೇರಿ: ಪಟ್ಟಣದ ಟೆಂಪೋ ನಿಲ್ದಾಣದ ಬಳಿಯಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಖಂಡಿಸಿ ಶ್ರೀರಾಮ ಸೇನೆ ಹಾಗೂ ಬಿಜೆಪಿಯಿಂದ ಕರೆ ನೀಡಲಾಗಿರುವ ಶಿಗ್ಗಾಂವ ಬಂದ್‌ಗೆ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಂದ್‌ಗೆ ಬೆಂಬಲ ಸೂಚಿಸಿದ ಕಿರಾಣಿ…
ಪ್ರಮೋದ ಮುತಾಲಿಕ್ ಅವರಿಗೆ ಹಾವೇರಿ ಜಿಲ್ಲೆ ಪ್ರವೇಶ ನಿರ್ಬಂಧ
ಹಾವೇರಿ : ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರಿಗೆ ಹಾವೇರಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಪ್ರತಿಬಂಧಕಾಜ್ಞೆ ಹೊರಡಿಸಿದ್ದಾರೆ. ಇತ್ತೀಚೆಗೆ ಶಿಗ್ಗಾಂವ ಪಟ್ಟಣದ ಆಂಜನೇಯ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಹಿನ್ನೆಲೆಯಲ್ಲಿ ಪ್ರಮೋದ…
ಹೆಲ್ಮೆಟ್ ಇಲ್ಲದೆ ಬುಲೆಟ್ ಸವಾರಿ ಮಾಡಿದ ಶಾಸಕ: 500 ರೂ. ದಂಡ!
ಹಾವೇರಿ: ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್ ಚಲಾಯಿಸಿದ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ( MLA Prakash Koliwad ) ಅವರಿಗೆ ಸಂಚಾರ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಆಗಸ್ಟ್ 25ರಂದು ಬೈಕ್ ರ್ಯಾಲಿಯೊಂದರಲ್ಲಿ ಶಾಸಕ ಪ್ರಕಾಶ ಕೋಳಿವಾಡ…
ಹೆಬ್ಬಾವು ರಕ್ಷಿಸಿ ಕಾಡಿಗೆ ಬಿಟ್ಟ ಉರಗ ರಕ್ಷಕ
ಹಾನಗಲ್ಲ: ತಾಲೂಕಿನ ಗೊಂದಿ ಹಾಗೂ ಮಕರವಳ್ಳಿ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಬೃಹತ್ ಗಾತ್ರದ ಹೆಬ್ಬಾವು Python ಅನ್ನು ಉರಗ ರಕ್ಷಕ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ತಾಲೂಕಿನ ಗೊಂದಿ ಗ್ರಾಮದ ಸಿದ್ದಲಿಂಗಪ್ಪ ಪೂಜಾರ ಅವರ ಮನೆ ಹಿಂಭಾಗದ ಭತ್ತದ ಹುಲ್ಲಿನ…















