ಹೆಸರು ಬೇರೆ.. ಊರು ಬೇರೆ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಂಡಾಡಿ`ಗುoಡ’!
ನಾನಾ ಭಾಷೆ, ನಾನಾ ಪ್ರದೇಶಗಳಲ್ಲಿ ನಾನಾ ಹೆಸರುಗಳಿಂದ ಪರಿಚಯಿಸಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ನಿತೀನ್ ರಾವ್ ಎಂಬಾತರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಬೆoಗಳೂರು, ಮಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ನಿತಿನ್ ರಾವ್ ಅಪರಾಧ ಕೃತ್ಯ ಎಸಗಿದ್ದು, ಎಲ್ಲಾ…
ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!
ವಿದ್ಯುತ್ ಉತ್ಪಾದನೆ ಮೂಲಕ ದೇಶಕ್ಕೆ ಕೊಡುಗೆ ನೀಡುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವೂ ಹೆಚ್ಚಾಗಿದೆ. ವಿದ್ಯುತ್ ಬಳಕೆಗಾರರ ನಿರ್ಲಕ್ಷ್ಯದಿಂದ ಜನ-ಜಾನುವಾರುಗಳು ವಿದ್ಯುತ್ ಅವಘಡಗಳಿಗೆ ಬಲಿಯಾಗುತ್ತಿದ್ದಾರೆ. ಸರ್ಕಾರಿ ಕಡತದಲ್ಲಿನ ಅಂಕಿ ಸಂಖ್ಯೆಗಳ ಪ್ರಕಾರ ಒಂದೇ ವರ್ಷದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ…
ಬೈಕಿಗೆ ಗುದ್ದಿದ ಬುಲೆರೋ: ಸ್ಥಳದಲ್ಲಿಯೇ ಸಾವನಪ್ಪಿದ ಬೈಕ್ ಸವಾರ
ಬುಲೇರೋ ಓಡಿಸಿಕೊಂಡು ಹಳಿಯಾಳಕ್ಕೆ ಹೋಗಿದ್ದ ಗೋಕರ್ಣದ ಅಭಿಜಿತ್ ನಾಯ್ಕ ಅವರು ಅಲ್ಲಿ ಸಂಜು ಪಾಟೀಲ್ ಎಂಬಾತರ ಬೈಕಿಗೆ ಬುಲೆರೋ ಗುದ್ದಿ, ಸಂಜು ಅವರ ಸಾವಿಗೆ ಕಾರಣರಾಗಿದ್ದಾರೆ. ಮೇ 12ರಂದು ಗೋಕರ್ಣ ಗಂಗಾವಳಿಯ ಅಭಿಜಿತ್ ನಾಯ್ಕ ಅವರು ಹಳಿಯಾಳಕ್ಕೆ ಹೋಗಿದ್ದರು. ರಾತ್ರಿ 9.15ರ…
ಗೋಕರ್ಣ ಭದ್ರತೆ ಇನ್ನಷ್ಟು ಬಲಿಷ್ಠ
ಗೋಕರ್ಣದ ಮೇಲಿನಕೇರಿಯಲ್ಲಿ 20 ವರ್ಷಗಳ ಹಿಂದೆ ಬಂದ್ ಆಗಿದ್ದ `ಪೊಲೀಸ್ ಮಾಹಿತಿ ಕೇಂದ್ರ’ ಇದೀಗ ಮತ್ತೆ ಶುರುವಾಗಲಿದೆ. ಈ ಕೇಂದ್ರ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ-ಸoವಹನಕ್ಕೆ ಸಹಾಯವಾಗುವ ನಿರೀಕ್ಷೆಯಿದೆ. ಪ್ರವಾಸಿ ತಾಣಗಳ ಮಾಹಿತಿ, ಸುರಕ್ಷತಾ ವಿಧಾನ, ಚಾರಣ ಮಾರ್ಗ, ಪುಣ್ಯಕ್ಷೇತ್ರದ…
ಅನಂತನ ಅವಾಂತರ: ಕಾರವಾರಕ್ಕೆ ಬಂದ ನಾರಿ: ಕಾರು ಕದ್ದು ಪರಾರಿ!
ಬೆಂಗಳೂರಿನಲ್ಲಿ ದುಡಿಯುತ್ತಿರುವ ಕಾರವಾರದ ಕಾರು ಚಾಲಕ ಅನಂತ ಎಂಬಾತರು ಮಹಿಳೆಯೊಬ್ಬರ ಮೋಹಕ್ಕೆ ಬಿದ್ದು ತಮ್ಮ ಕಾರು ಕಳೆದುಕೊಂಡಿದ್ದಾರೆ. ಬಾಡಿಗೆ ಕಾರಿನ ಮೂಲಕ ಕಾರವಾರಕ್ಕೆ ಬಂದ ನಾರಿ ಅನಂತರ ಸ್ನೇಹ ಬೆಳೆಸಿ ಕಾರು ಬಾಡಿಗೆ ಪಡೆದು ಪರಾರಿಯಾಗಿದ್ದು, ಬೆಂಗಳೂರು ಪೊಲೀಸರು ಇದೀಗ ಆ…
ಸಿದ್ದು ಭೇಟಿಗೆ ಸಿದ್ಧತೆ ನಡೆಸಿದ ಸಿದ್ದಿ ಸಮುದಾಯ!
ಯಲ್ಲಾಪುರ ತಾಲೂಕಿನ ಸಿದ್ದಿ ಸಮುದಾಯದವರು ನಿಯೋಗವೊಂದನ್ನು ರಚಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಸಿದ್ಧತೆ ನಡೆಸಿದ್ದಾರೆ. ಮೇ 19ರಂದು ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಸೋಮವಾರ ಯಲ್ಲಾಪುರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸಭೆ ನಡೆದಿದ್ದು, ಸಿದ್ದಿ…
ಅಂಗನವಾಡಿಗಳಿಗೆ ಶಕ್ತಿ ತುಂಬಲು ಡೀಸಿಗೆ ಆಸಕ್ತಿ: ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಚಿಕಿತ್ಸೆ!
ಕಳೆದ ಮೂರು ತಿಂಗಳ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 147 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. `ಈ ಎಲ್ಲಾ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ…
ಹಲಸಿನ ಮರ ಏರಿದ ಹೆಣ್ಣು ಕರಡಿಗೆ ದೊಡ್ಡ ಆಘಾತ!
ಹಲಸಿನ ಹಣ್ಣಿಗೆ ಆಸೆಪಟ್ಟು ಮರ ಏರಿದ ಹೆಣ್ಣು ಕರಡಿ ಮರದಿಂದ ಬಿದ್ದು ಸಾವನಪ್ಪಿದೆ. ಮರದ ಪಕ್ಕ ಹಾದುಹೋಗಿದ್ದ ವಿದ್ಯುತ್ ಸ್ಪರ್ಶದಿಂದ ಕರಡಿಗೆ ಆಘಾತವಾಗಿದೆ. ಜೊಯಿಡಾ-ದಾಂಡೇಲಿ ರಸ್ತೆಯ ಚಾಪೋಲಿಯಲ್ಲಿ ಅನಾಧಿಕಾಲದಿಂದಲೂ ಹಲಸಿನ ಮರವಿದೆ. ರಸ್ತೆ ಪಕ್ಕದಲ್ಲಿಯೇ ಇರುವ ಈ ಮರಕ್ಕೆ ಈ ಬಾರಿ…
ಅಗ್ಗದ ಮದ್ಯಕ್ಕೆ ನೂರಾರು ಮನೆ ಹಾಳು: ಗೋವಾ ಮದ್ಯದ ಜೊತೆ ಕಮರಿಪೇಟೆ ಸರಾಯಿ ಕುಸ್ತಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡಿಮೆ ಗುಣಮಟ್ಟದ ಕಳಪೆ ದರ್ಜೆಯ ಮದ್ಯ ಮಾರಾಟವಾಗುತ್ತಿದೆ. ಸೇವನೆಗೆ ಅಯೋಗ್ಯವಾದ ಗೋವಾ ಮದ್ಯದ ಜೊತೆ ಈಚೆಗೆ ಕಮರಿಪೇಟೆಯ ಕಳ್ಳಬಟ್ಟಿ ಸರಾಯಿ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಜಿಲ್ಲೆಯ ಅನೇಕ ಗೂಡಂಗಡಿ, ಡಾಬಾಗಳಲ್ಲಿ ಬೆಳಗ್ಗೆ 5 ಗಂಟೆಯ…
ಜಾನುವಾರು ಕಳ್ಳ ಸಾಗಾಟಕ್ಕೆ ಕೇರಳವೇ ರಾಜಮಾರ್ಗ!
ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಕೇರಳದಿಂದ ಅಕ್ರಮ ಜಾನುವಾರು ಸಾಗಿಸಲಾಗುತ್ತಿದೆ. ಗೋವಧೆ ಉದ್ದೇಶದಿಂದ ಹಸುಗಳನ್ನು ಹಿಂಸಾತ್ಮಕವಾಗಿ ಭಟ್ಕಳಕ್ಕೆ ತರಲಾಗುತ್ತಿದೆ. ಕೇರಳದಿಂದ ಭಟ್ಕಳಕ್ಕೆ ಬರುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿದ ಪೊಲೀಸರು ಅವುಗಳನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಅಕ್ರಮ ಜಾನುವಾರು ಸಾಗಾಟ ಜಾಲದಲ್ಲಿ ಸಕ್ರಿಯವಾಗಿದ್ದ ಮೂವರನ್ನು…
















