ಬೆಳೆ ವಿಮೆ: ಅಂತು ಇಂತೂ ಬಂತು!
ಕಳೆದ ಐದು ತಿಂಗಳಿನಿoದ ನಡೆಯುತ್ತಿದ್ದ ಅಡಿಕೆ ಬೆಳೆಗಾರರು ಹಾಗೂ ಕ್ಷೇಮಾ ಇನ್ಸುರೆನ್ಸ ಕಂಪನಿ ನಡುವಿನ ತಿಕ್ಕಾಟ ಕೊನೆಯಾಗಿದ್ದು, ಅಡಿಕೆ ಬೆಳೆಗಾರರಿಗೆ ಗೆಲುವು ಸಿಕ್ಕಿದೆ. ಎರಡು ದಿನಗಳಿಂದ ರೈತರ ಖಾತೆಗೆ ಅಡಿಕೆ ಬೆಳೆ ವಿಮೆಯ ಪರಿಹಾರ ಜಮಾ ಆಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ…
ಅಡುಗೆ ಸಿಲೆಂಡರ್ ದುರ್ಬಳಕೆ: ಸಿಕ್ಕಿಬಿದ್ದರೆ ಕಠಿಣ ಕ್ರಮ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆಯ ಉದ್ದೇಶಕ್ಕೆ ನೀಡಲಾಗುವ ಅಡುಗೆ ಅನಿಲದ ಸಿಲೆಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವವರ ಮೇಲೆ ಜಿಲ್ಲಾಡಳಿತ ನಿಗಾವಿರಿಸಿದೆ. `ಗೃಹ ಬಳಕೆ ಸಿಲೆಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದ ರೀತಿಯಲ್ಲಿ ಹೆಚ್ಚಿನ ನಿಗಾವಹಿಸಿ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಅವರು…
ಅಡ್ಡಾದಿಡ್ಡಿ ಚಲಿಸಿದ ಗ್ಯಾಸ್ ಟ್ಯಾಂಕರ್: ಚಾಲಕನಿಗೆ ಹೃದಯ ಆಘಾತ!
ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಅಡುಗೆ ಅನಿಲ ಹೊತ್ತು ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಲಾರಿಗೆ ಗುದ್ದಿದೆ. ಟ್ಯಾಂಕರ್ ಚಾಲಕನಿಗೆ ಹೃದಯಘಾತವಾಗಿರುವುದೇ ಅಪಘಾತಕ್ಕೆ ಕಾರಣ. ಸೋಮವಾರ ತಮಿಳುನಾಡು ಮೂಲದ ಲಾರಿ ಗ್ಯಾಸ್ ತುಂಬಿಕೊoಡು ಸಾಗುತ್ತಿದ್ದು, ಅದರ ಚಾಲಕ ಹಠಾತ್ ಆಗಿ ಎದೆನೋವಿನಿಂದ ಬಳಲಿದರು. ಅವರನ್ನು…
ಸುಂದರ ಶಿವಪುರ: ಸೌಕರ್ಯಕ್ಕೆ ಬರ!
ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸುಂದರ ಪರಿಸರದಿಂದ ಶ್ರೀಮಂತವಾಗಿರುವ ಜೊಯಿಡಾದ ಶಿವಪುರ ಅಭಿವೃದ್ಧಿ ವಿಷಯದಲ್ಲಿ ಮಾತ್ರ ಹಿಂದುಳಿದಿದೆ. ಯಲ್ಲಾಪುರ-ಜೊಯಿಡಾ-ದಾಂಡೇಲಿ-ಉಳುವಿಯೊoದಿಗೆ ನಿಕಟ ಸಂಪರ್ಕದಲ್ಲಿರುವ ಈ ಊರು ಇನ್ನೂ ಆಧುನಿಕ ಪ್ರಪಂಚಕ್ಕೆ ತೆರೆದುಕೊಂಡಿಲ್ಲ. ರಾಜ್ಯದಲ್ಲಿ ಅತಿ ವಿಸ್ತಾರವಾಗಿರುವ ಜೊಯಿಡಾ ತಾಲೂಕು ಹಿಂದುಳಿದ ಪ್ರದೇಶವಾಗಿದೆ. ಅದರಲ್ಲಿಯೂ ಶಿವಪುರ ಎಂಬ…
SSLC ಫಲಿತಾಂಶ | ಕರಾವಳಿ ಮಕ್ಕಳ ಸಾಧನೆ: 3ನೇ ಸ್ಥಾನಕ್ಕೆ ಮುಂಬಡ್ತಿಪಡೆದ ಕಾರವಾರ!
ಶುಕ್ರವಾರ ಪ್ರಕಟವಾದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆ ಶೇ 83.21ರ ಸಾಧನೆ ಮಾಡಿದೆ. ಆ ಮೂಲಕ ರಾಜ್ಯಕ್ಕೆ 3ನೇ ಸ್ಥಾನಪಡೆದಿದೆ. 2024ನೇ ಸಾಲಿನಲ್ಲಿ 5ನೇ ಸ್ಥಾನ ಗಳಿಸಿದ್ದ ಶೈಕ್ಷಣಿಕ ಜಿಲ್ಲೆ ಈ ಬಾರಿ ಎರಡು…
10 ಕೋಟಿ ಕೇಳಿದವರಿಗೆ 50 ಲಕ್ಷ ರೂ ಭರವಸೆ | ನೆಪಮಾತ್ರಕ್ಕೆ ದಾಖಲಾದ ಕೊಲೆ ಪ್ರಕರಣ: ದೂರು ನೀಡಿದರೂ ಆಗಿಲ್ಲ ಕಠಿಣ ಕ್ರಮ!
ಶಿರೂರು ಗುಡ್ಡಕುಸಿತ ಪ್ರಕರಣದಲ್ಲಿ 11 ಜನರ ಸಾವಿಗೆ ಕಾರಣವಾದ ಐಆರ್‌ಬಿ ಕಂಪನಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿ ತಿಂಗಳು ಕಳೆದರೂ ಒಬ್ಬರ ಬಂಧನವೂ ಆಗಿಲ್ಲ. ಈ ಬಗ್ಗೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇ…
ಅಂಗವಿಕಲನ ಅಂತರಾಳ: ತಾಯಿ – ಮಗುವಿನ ಜೀವ ಕಾಪಾಡಿದ ಅಬ್ದುಲ್ಲ!
ಎರಡು ಕಾಲು ಕಳೆದುಕೊಂಡರೂ ಸ್ವಾವಲಂಬಿ ಬದುಕಿಗಾಗಿ ಗೂಡಂಗಡಿ ನಡೆಸುವ ದಾಂಡೇಲಿಯ ಅಬ್ದುಲ್ ಸತ್ತರ್ ಅವರು ರಕ್ತಸ್ರಾವದಿಂದ ಬಳಲುತ್ತಿರುವ ಬಾಣಂತಿಗೆ ರಕ್ತ ನೀಡುವ ಮೂಲಕ ಎರಡು ಜೀವ ಕಾಪಾಡಿದ್ದಾರೆ. ದಾಂಡೇಲಿಯ ವನಶ್ರೀ ನಗರದಲ್ಲಿ ಗೂಡಂಗಡಿ ಹೊಂದಿರುವ ಅಬ್ದುಲ್ ಸತ್ತಾರ್ ಅವರು ಬಾಲ್ಯದಲ್ಲಿಯೇ ತಮ್ಮ…
ಹೆದ್ದಾರಿ ಅಧಿಕಾರಿಗಳಿಗೆ ನದಿ ಹೂಳೆತ್ತುವ ಕೆಲಸ!
ಅಂಕೋಲಾದ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ತೆರವು ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಂದರು ಇಲಾಖೆಯ ಆಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ…
ಹದಗೆಟ್ಟ ರಸ್ತೆಗೆ ದುರಸ್ತಿ ಭಾಗ್ಯ: ಅನಂತಮೂರ್ತಿ ಹೋರಾಟಕ್ಕೆ ಮೊದಲ ಯಶಸ್ಸು!
ಶಿರಸಿ ಮತ್ತಿಘಟ್ಟ ಕೆಳಗಿನಕೇರಿ ಜನರ ಸಮಸ್ಯೆಗಳ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಪ್ರತಿಭಟನೆ ಶುರು ಮಾಡಿದ್ದು, ಪ್ರತಿಭಟನೆಗೂ ಮುನ್ನವೇ ಜಿಲ್ಲಾಡಳಿತ ಸಂದಾನ ಸಭೆ ನಡೆಸಿದೆ. ಸದ್ಯ 5 ಲಕ್ಷ ರೂ ವೆಚ್ಚದಲ್ಲಿ ತುರ್ತಾಗಿ ರಸ್ತೆ ಕಾಮಗಾರಿ…
ಅಪಾಯಕಾರಿ ಚಾರಣಕ್ಕೆ ಅರಣ್ಯ ಇಲಾಖೆ ನಿರ್ಬಂಧ
ಚಾರಣಕ್ಕೆ ತೆರಳಿದ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಗೋಕರ್ಣದಲ್ಲಿ ಸಾವನಪ್ಪಿರುವ ಕಾರಣ ಅರಣ್ಯ ಇಲಾಖೆ ಆ ಭಾಗದಲ್ಲಿನ ಚಾರಣಕ್ಕೆ ತಡೆ ಒಡ್ಡಿದೆ. ಜಟಾಯು ತೀರ್ಥಕ್ಕೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ಸದ್ಯ ಬೇಲಿ ನಿರ್ಮಿಸಲಾಗಿದೆ. ಈಚೆಗೆ ಗೋಕರ್ಣಕ್ಕೆ ಬರುವ ಪ್ರವಾಸಿಗರನ್ನು ಕೆಲವರು ಈ ಮಾರ್ಗದಲ್ಲಿ…
















