6

RFO ಸ್ಥಾನ ಅಲಂಕರಿಸಿದ ಅರಬೈಲು ಹೆಬ್ಬಾರ: ಕಾನೂನು ಪುಸ್ತಕ ಇಲ್ಲಿ ಕೆಲಸ ಮಾಡುವುದಿಲ್ಲ!

ಸರ್ಕಾರಿ ಕಾರ್ಯಕ್ರಮ ಉದ್ಘಾಟನೆಗಾಗಿ ಸಂಚಾರ ನಡೆಸಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಿರವತ್ತಿಯ ಅರಣ್ಯ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. `ಕಾನೂನು ಪುಸ್ತಕ ಹಿಡಿದು ಇಲ್ಲಿ ಕಾಡು ರಕ್ಷಿಸಲು ಆಗುವುದಿಲ್ಲ. ಜನರ ಪ್ರೀತಿ ವಿಶ್ವಾಸಗಳಿಸಿ ಕಾಡು ಉಳಿಸಿ’ ಎಂದು ಶಿವರಾಮ ಹೆಬ್ಬಾರ್ ಕಿವಿಮಾತು ಹೇಳಿದ್ದಾರೆ.

ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಟ್ಟ ಅವರು ನೇರವಾಗಿ ಕಚೇರಿ ಒಳಗೆ ಪ್ರವೇಶಿಸಿದರು. ಹೊಸದಾಗಿ ಈ ಅರಣ್ಯ ವಿಭಾಗಕ್ಕೆ ಬಂದ ಸಿಬ್ಬಂದಿಯನ್ನು ಮಾತನಾಡಿಸಿದ ಅವರು `ಎಲ್ಲಿಂದ ಬಂದ್ದಿದ್ದೀರಿ?’ ಎಂದು ವಿಚಾರಿಸಿದರು. ನಾನಾ ಭಾಗದಿಂದ ಇಲ್ಲಿಗೆ ವರ್ಗವಾಗಿ ಬಂದವರನ್ನು ಉದ್ದೇಶಿಸಿ `ಕಾನೂನು ಪುಸ್ತಕ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಕಾಡು ರಕ್ಷಣೆಗಾಗಿ ಜನರ ವಿಶ್ವಾಸಗಳಿಸಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ಈ ಭಾಗದಲ್ಲಿ ಮನೆಯಿಂದ ಹೊರಗೆ ಬಿದ್ದರೆ ಕಾಡು ಸಿಗುತ್ತದೆ. ಅರಣ್ಯವನ್ನು ಉಳಿಸಿ ಜನರನ್ನು ಸಂಬಾಳಿಸಿ’ ಎಂದು ಶಿವರಾಮ ಹೆಬ್ಬಾರ್ ಕಿವಿಮಾತು ಹೇಳಿದರು. `ಈ ವರ್ಷ ಎಷ್ಟು ಗಿಡ ನೆಡಲು ಸಿದ್ಧತೆ ಮಾಡಿಕೊಂಡಿದ್ದೀರಿ? ಕಾಡು ರಕ್ಷಣೆಗೆ ಹೊಸದಾಗಿ ಯಾವ ಯೋಜನೆ ತಂದ್ದೀರಿ?’ ಎಂದು ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ ಹಾಗೂ ಎಸಿಎಫ್ ಭಾಗ್ಯಶ್ರೀ ಬೀರಾರ್ ಅವರನ್ನು ಪ್ರಶ್ನಿಸಿದರು.

`ಈ ವರ್ಷ 2 ಲಕ್ಷ ಗಿಡ ನೆಡಲು ಸಿದ್ಧತೆ ನಡೆದಿದೆ. ಈ ಬಾರಿ ಅರಣ್ಯದಲ್ಲು ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಯೋಗಪಡೆಯಲಾಗುತ್ತದೆ. ಈ ಬಗ್ಗೆ ಇಲಾಖೆಯಿಂದಲೂ ಸೂಚನೆ ಬಂದಿದೆ’ ಎಂದು ಅರಣ್ಯಾಧಿಕಾರಿ ಅಜಯ ನಾಯ್ಕ ಮಾಹಿತಿ ನೀಡಿದರು.

ಅರಣ್ಯಾಧಿಕಾರಿಗಳಿಗೆ ಶಿವರಾಮ ಹೆಬ್ಬಾರ್ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..

  • Related Posts

    ‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

    Share this… Facebook Pinterest Twitter Linkedin Whatsappಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ ಮುಂದೆ ಮುಖ್ಯಮಂತ್ರಿಗಳು…

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    You cannot copy content of this page