6

ಸಪ್ತಪದಿ ಸಡಗರಕ್ಕೂ ಮುನ್ನ ಕಲಾ ಸಂಗಮ: ಯಕ್ಷಗಾನ-ಭರತನಾಟ್ಯದ ಸಮಾಗಮ!

ಯಲ್ಲಾಪುರದ ಭಾರ್ಗವಿ ಬಿ ಎಚ್ ಹಾಗೂ ಜೋಗ ಬಳಿಯ ಚಂದನ ಕಲಾಹಂಸ ಅವರು ಸಪ್ತಪದಿ ಸಡಗರಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಭರತನಾಟ್ಯ ಹಾಗೂ ಯಕ್ಷಗಾನದ ಕೂಡುವಿಕೆಯಲ್ಲಿ ಅವರು ನೃತ್ಯ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ.

ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ಭಾರ್ಗವಿ ಬಿ ಎಚ್ ಭರತನಾಟ್ಯ ಕಲಾವಿದರು. ಬಾಲ್ಯದಿಂದಲೂ ಭರತನಾಟ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ ಅವರು ನಾನಾ ಭಾಗಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಜೋಗದ ಕಾಳಮಂಜಿಯ ಚಂದನ ಕಲಾಹಂಸ ಅವರದ್ದು ಸಹ ಸಾಂಸ್ಕೃತಿಕ ಮನಸ್ಸು. ಹೊಸ್ತೋಟ ಮಂಜುನಾಥ ಭಾಗ್ವತ ಅವರ ಬಳಿ ಅಭ್ಯಾಸ ನಡೆಸಿದ್ದ ಚಂದನ ಅವರು 6ನೇ ತರಗತಿಯಲ್ಲಿರುವಾಗಲೇ ಅಭಿಮನ್ಯುವಿನ ಪಾತ್ರ ಮಾಡಿದ್ದರು. ಡಿಜಿಟಲ್ ಮಾರ್ಕೇಟಿಂಗ್ ಕಂಪನಿ ನಡೆಸುತ್ತಿರುವ ಚಂದನ್ ಅವರು ಬಿಡುವಿನ ವೇಳೆ ತಾಳಮದ್ದಲೆಗಳಲ್ಲಿ ಭಾಗವತರಾಗಿಯೂ ಭಾಗವಹಿಸುತ್ತಾರೆ.

ಅಕ್ಟೊಬರ್ 18ಕ್ಕೆ ಚಂದನ್ ಹಾಗೂ ಭಾರ್ಗವಿ ಬಿ ಎಚ್ ಮದುವೆ ಮಾತುಕಥೆ ನಡೆಸಿದರು. ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರು ಸಾಂಸ್ಕೃತಿಕ ಶ್ರೀಮಂತರಾಗಿರುವ ಕಾರಣ ವಿಭಿನ್ನವಾಗಿ ಯೋಜಿಸಿ ಯಕ್ಷಗಾನ ಹಾಗೂ ಭರತನಾಟ್ಯವನ್ನು ಒಳಗೊಂಡ `ಪ್ರೀ ವೆಡ್ಡಿಂಗ್ ಶೂಟ್’ ಮಾಡಿದರು. ಬೆಂಗಳೂರಿನ ರಾಗಿಹಳ್ಳಿಯಲ್ಲಿರುವ ರಾಮಕೃಷ್ಣ ವೇದ ವಿಜ್ಞಾನ ಪಾಠಶಾಲೆ ಹಾಗೂ `ರುತುಂಬರ ರಿಟ್ರೀಟ್’ನಲ್ಲಿ ಶುಟಿಂಗ್ ನಡೆದಿದ್ದು, ಕಾನಸೂರಿನ ಮ್ಯಾಜಿಕಲ್ ಪ್ರೇಮ್ಸಿನ ಗಣಪತಿ ಹೆಗಡೆ ಕ್ಯಾಮರಾ ಹಿಡಿದರು. ಚಂದನ್ ಅವರೇ ಅದನ್ನು ಸಂಕಲನ ಮಾಡಿ ಹಂಚಿಕೊ0ಡರು.

ಮೂರು ದಿನಗಳ ಹಿಂದೆ ಬಿಡುಗಡೆಯಾದ ಈ ವಿಡಿಯೋ ಇದೀಗ 5 ಲಕ್ಷಕ್ಕೂ ಅಧಿಕ ಜನರನ್ನು ತಲುಪಿದೆ. ವಿಭಿನ್ನ ಆಲೋಚನೆ ಮೂಲಕ ಕಲಾಪ್ರೇಮಿಗಳಿಗೆ ರಸದೌತಣ ನೀಡಿದ `ಪ್ರೀ ವೆಡ್ಡಿಂಗ್’ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ನವೆಂಬರ್ 14ಕ್ಕೆ ಈ ಜೋಡಿ ಸಪ್ತಪದಿ ತುಳಿಯಲ್ಲಿದ್ದಾರೆ.

ಭಾರ್ಗವಿ ಹಾಗೂ ಚಂದನ್ ಅವರ ಪ್ರೀ ವೆಡ್ಡಿಂಗ್ ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    You cannot copy content of this page