6

ಅಗ್ನಿ ಆಕಸ್ಮಿಕ: ಹೊತ್ತಿ ಉರಿದ ಕೈಗಾ ಬಸ್ಸು!

ಕಾರವಾರ: ಕೈಗಾ ಅಣು ಘಟಕದಿಂದ ಹೊರಟ ಬಸ್ಸು ವಿರ್ಜೆ ಬಳಿ ಬೆಂಕಿಗೆ ಆಹುತಿಯಾಗಿದೆ. ಶುಕ್ರವಾರ ನಸುಕಿನ ವೇಳೆ ಬಸ್ಸು ಹೊತ್ತಿ ಉರಿದಿದೆ.

ಕೈಗಾ ಅಣು ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಸಂಸ್ಥೆಯ ಬಸ್ಸು ಇದಾಗಿತ್ತು. ಅಗ್ನಿ ಅವಘಡದ ವೇಳೆ ಬಸ್ಸಿನಲ್ಲಿ ಚಾಲಕ ಸೇರಿ ಮೂರು ಜನ ಮಾತ್ರ ಇದ್ದರು. ಹೊಗೆ ಕಾಣಿಸಿಕೊಂಡ ಕೂಡಲೇ ಅವರೆಲ್ಲರೂ ಬಸ್ಸಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ ಕೈಗಾ ಅಣು ವಿದ್ಯುತ್ ಘಟಕದಲ್ಲಿ ತಂಗಿದ್ದ ಬಸ್ಸು ಶುಕ್ರವಾರ ಬೆಳಗ್ಗೆ ಉದ್ಯೋಗಿಗಳನ್ನು ಕರೆತರಲು ಟೌನ್‌ಶಿಪ್ ಕಡೆ ಹೊರಟಿತ್ತು. ಬೆಳಗ್ಗೆ 5.10ರ ವೇಳೆಗೆ ಬಸ್ಸು ವಿರ್ಜೆ ತಲುಪಿತ್ತು. ಆಗ ಬಸ್ಸಿನಿಂದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದು, ಬಸ್ಸಿನಿಂದ ಇಳಿದು ತಪಾಸಣೆ ನಡೆಸಿದರು. ಕೆಲವೇ ನಿಮಿಷಗಳಲ್ಲಿ ಇಡೀ ಬಸ್ಸು ಅಗ್ನಿಗೆ ಆಹುತಿಯಾಯಿತು. ತಕ್ಷಣ ಬಸ್ಸಿನಲ್ಲಿದ್ದವರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು.

ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರೊಳಗೆ ಬಸ್ಸು ಭಾಗಷಃ ಸುಟ್ಟು ಕರಕಲಾಗಿತ್ತು. ಅದಾಗಿಯೂ ಅಗ್ನಿಶಾಮಕ ಸಿಬ್ಬಂದಿ ಹೊತ್ತಿ ಉರಿಯುತ್ತಿದ್ದ ಬೆಂಕಿ ಆರಿಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ ವಿಕಾಸ ಟ್ರಾವೆಲ್ಸ ಎಂಬ ಕಂಪನಿಗೆ ಸೇರಿದ ಬಸ್ಸು ಇದಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಅವಘಡಕ್ಕೆ ಸ್ಪಷ್ಟ ಕಾರಣವೂ ಗೊತ್ತಾಗಿಲ್ಲ.

ನಸುಕಿನ ವೇಳೆ ಬಸ್ಸಿಗೆ ಬೆಂಕಿ ಹತ್ತಿ ಉರಿದ ವಿಡಿಯೋ ಇಲ್ಲಿ ನೋಡಿ..

  • Related Posts

    ಬೇಡ್ತಿ–ವರದಾ ಯೋಜನೆಗೆ ಹೊಸ ತಿರುವು?

    Share this… Facebook Pinterest Twitter Linkedin Whatsappಬೇಡ್ತಿ–ವರದಾ ನದಿ ಜೋಡಣೆ: ಸ್ವರ್ಣವಲ್ಲಿಶ್ರೀಗಳೊಂದಿಗೆ ವಿಶೇಷ ಸಭೆ, ಹಾವೇರಿ ರೈತ ಸಂಘದಿಂದ ಧನ್ಯವಾದ ಹಾವೇರಿ: ಬೇಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ, ಹಾವೇರಿಯಿಂದ 15ಕ್ಕೂ ಹೆಚ್ಚು…

    ಹಾವೇರಿಯಲ್ಲಿ ಕಬ್ಬು ಬೆಳೆಗಾರರ ಸಭೆ ರದ್ದು !!

    Share this… Facebook Pinterest Twitter Linkedin Whatsappಹಾವೇರಿ: ಇಂದು ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ರದ್ದು; ರೈತರು ಸಭೆಗೆ ಬರುವುದು ಬೇಡ – ರೈತ ಸಂಘದ ಮನವಿ ಕರ‍್ಖಾನೆ ಮಾಲೀಕರು ಸಭೆಗೆ ಗೈರಾಗುವ ಮಾಹಿತಿ ಹಿನ್ನೆಲೆ; ರೈತ ಸಂಘದ ರಾಜ್ಯಾಧ್ಯಕ್ಷ…

    You cannot copy content of this page