6

ಕಾಳಿ | ಹೊಸ ಸೇತುವೆಗೆ ಮುತ್ತಿಕ್ಕಿದ ಹಳೆ ಸೇತುವೆ ತುಂಡು!

ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿ ಕುಸಿತ ಕಂಡಿದ್ದ ಪುರಾತನ ಸೇತುವೆಯ ಪಿಲ್ಲರಿನ ಒಂದು ಭಾಗ ಮಂಗಳವಾರ ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಇದರಿಂದ ಸೇತುವೆ ಮೇಲೆ ಸಂಚರಿಸುವವರು ಆತಂಕವ್ಯಕ್ತಪಡಿಸಿದ್ದು, ನಂತರ ಸುರಕ್ಷಿತವಾಗಿ ತಲುಪಬೇಕಾದ ಸ್ಥಳಕ್ಕೆ ತೆರಳಿದರು.

ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿ ಹಳೆ ಸೇತುವೆ ತೆರವು ಕೆಲಸ ಮಾಡುತ್ತಿದೆ. ಸಾಕಷ್ಟು ಮುನ್ನಚ್ಚರಿಕೆವಹಿಸಿ ಕೆಲಸ ಮಾಡುವಂತೆ ಜಿಲ್ಲಾಡಳಿತವೂ ಕಂಪನಿಗೆ ಸೂಚಿಸಿದೆ. ಕಾಳಿ ಸೇತುವೆ ಕುಸಿದು ಬಿದ್ದಾಗ ಹಾಗೂ ಅದರ ಒಂದು ಪಿಲ್ಲರ್ ಅಪಾಯಕ್ಕೆ ಸಿಲುಕಿದಾಗಲೂ ಜಿಲ್ಲಾಡಳಿತ ಈ ಬಗ್ಗೆ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಹೊಸ ಸೇತುವೆಗೆ ಅಪಾಯ ಆಗದಂತೆ ಮುನ್ನಚ್ಚರಿಕೆವಹಿಸುವಂತೆ ತಿಳಿಸಲಾಗಿದೆ.

ಅದಾಗಿಯೂ, ಮಂಗಳವಾರ ಹಳೆಯ ಸೇತುವೆಯ ತುಂಡೊoದು ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಸದ್ಯ ಭಾರೀ ಪ್ರಮಾಣದ ಯಂತ್ರಗಳ ಮೂಲಕ ಹಳೆ ಸೇತುವೆಯನ್ನು ತುಂಡರಿಸುವ ಕೆಲಸ ನಡೆಯುತ್ತಿದೆ. ಹೊಸ ಸೇತುವೆಗೆ ಧಕ್ಕೆ ಆದಲ್ಲಿ ಕಾರವಾರ-ಗೋವಾ ಮಾರ್ಗದ ಸಂಚಾರಕ್ಕೆ ತೊಡಕಾಗಲಿದೆ. ಮಂಗಳವಾರ ಪಿಲ್ಲರಿನ ತುಂಡು ಸೇತುವೆಗೆ ತಾಗಿದ ಪರಿಣಾಮ ಸೇತುವೆ ಅಲುಗಾಡಿದ ಅನುಭವವನ್ನು ಅಲ್ಲಿನವರು ಹಂಚಿಕೊoಡಿದ್ದಾರೆ.

ಪಿಲ್ಲರಿನ ತುಂಡು ನಂತರ ನದಿಗೆ ಬಿದ್ದಿದ್ದು, ಈ ವೇಳೆ ಬೇರೆ ಯಾವುದೇ ಸಮಸ್ಯೆ ಆಗಿಲ್ಲ. ಭಾರೀ ಪ್ರಮಾಣದ ಶಬ್ದ ಕೇಳಿಸಿದ ಬಗ್ಗೆಯೂ ಅಲ್ಲಿನವರು ಮಾಹಿತಿ ನೀಡಿದ್ದಾರೆ. ಸದ್ಯ ರಾತ್ರಿ ವೇಳೆಯೂ ಹಳೆ ತೆರವು ಕಾರ್ಯಾಚರಣೆ ಮುಂದುವರೆದಿದೆ. ತಹಶೀಲ್ದಾರ್ ನಿಶ್ಚಲ್ ನರೋನಾ ಸೇರಿ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕಾಳಿ ಸಂಗಮ ಪ್ರದೇಶದ ಮಂಗಳವಾರದ ಸ್ಥಿತಿ-ಗತಿಯ ವಿಡಿಯೋ ಇಲ್ಲಿ ನೋಡಿ.

  • Related Posts

    ಬೇಡ್ತಿ–ವರದಾ ಯೋಜನೆಗೆ ಹೊಸ ತಿರುವು?

    Share this… Facebook Pinterest Twitter Linkedin Whatsappಬೇಡ್ತಿ–ವರದಾ ನದಿ ಜೋಡಣೆ: ಸ್ವರ್ಣವಲ್ಲಿಶ್ರೀಗಳೊಂದಿಗೆ ವಿಶೇಷ ಸಭೆ, ಹಾವೇರಿ ರೈತ ಸಂಘದಿಂದ ಧನ್ಯವಾದ ಹಾವೇರಿ: ಬೇಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿದಂತೆ, ಹಾವೇರಿಯಿಂದ 15ಕ್ಕೂ ಹೆಚ್ಚು…

    ಮಗಳ ಮದುವೆಗೆ ಪ್ರಧಾನಿ ಮೋದಿಗೆ ಆಹ್ವಾನ!

    Share this… Facebook Pinterest Twitter Linkedin Whatsappಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಗಳ ವಿವಾಹಕ್ಕೆ ಆಹ್ವಾನಿಸಿದ ಸಂಸದ ಬಸವರಾಜ ಬೊಮ್ಮಾಯಿ ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ…

    You cannot copy content of this page