6

ಅಪಘಾತ ತಪ್ಪಿಸಲು ಹೋದವನಿಗೆ ಅಪಘಾತ: ಸವಾರರಿಬ್ಬರನ್ನು ಕೆಡವಿದ ಹೆದ್ದಾರಿ ಹೊಂಡ!

ಭಟ್ಕಳದಲ್ಲಿ ಅಪಘಾತ ತಪ್ಪಿಸಲು ಹೋದ ಬೈಕ್ ಸವಾರ ಹೆದ್ದಾರಿ ಅಂಚಿನ ಹೊಂಡಕ್ಕೆ ಬಿದ್ದಿದ್ದು, ಈ ದುರಂತದಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಗುರುವಾರ ನಡೆದ ಈ ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೊತೆಗೆ ಆ ದೃಶ್ಯಾವಳಿಗಳು ಸಾಕಷ್ಟು ವೈರಲ್ ಆಗಿದೆ. ಸಂಶುದ್ಧೀನ್ ಸರ್ಕಲ್ ಸಮೀಪದ ಸತ್ಕಾರ್ ಹೊಟೇಲ್ ಮುಂದೆ ದೊಡ್ಡ ಪ್ರಮಾಣದಲ್ಲಿ ಹೊಂಡ ಬಿದ್ದಿದ್ದು, ಒಂದು ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿಯಾಗಿ ಆ ಹೊಂಡದಲ್ಲಿ ಬೈಕ್ ಸವಾರರು ಬಿದ್ದಿದ್ದಾರೆ.

ಒಂದು ವಾರದ ಹಿಂದೆ ಮಳೆ ನೀರು ಹರಿದು ಹೋಗಲು ಹೆದ್ದಾರಿ ಪಕ್ಕದಲ್ಲಿದ್ದ ರಾಜಕಾಲುವೆ ಬಿಡಿಸಿದ್ದರು. ಈ ವೇಳೆ ಅಲ್ಲಿ ಹೊಂಡ ತೆಗೆದಿದ್ದರು. ಆದರೆ, ಆ ಹೊಂಡದಿoದ ಯಾವ ಪ್ರಯೋಜನವೂ ಆಗಿರಲಿಲ್ಲ. ಮಳೆ ಬಂದಾಗ ಮತ್ತೆ ರಸ್ತೆ ಮೇಲೆ ನೀರು ನಿಲ್ಲುತ್ತಿದ್ದು, ಹೊಂಡವನ್ನು ಮುಚ್ಚಿರಲಿಲ್ಲ.

ರಸ್ತೆ ಅಗಲೀಕರಣ ಮಾಡುವ ವೇಳೆ ರಸ್ತೆಯ 2 ಬದಿಗಳಲ್ಲಿ ಚರಂಡಿ ಮಾಡಿದಿರುವ ಕಾರಣ ಇದೀಗ ಅನೇಕ ಅವಾಂತರ ನಡೆಯುತ್ತಿದೆ. ಹೀಗಾಗಿ ಇನ್ನಷ್ಟು ಅಪಾಯ ನಡೆಯುವ ಮುನ್ನ ಹೆದ್ದಾರಿ ಅಭಿವೃದ್ಧಿ ಗುತ್ತಿಗೆಪಡೆದ ಐಆರ್‌ಬಿ ಕಂಪನಿ ಗಮನಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಇಲ್ಲಿ ನೋಡಿ..

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page