6

ಮನುಷ್ಯನನ್ನು ಬಲಿಪಡೆದ ಹೊಲಕ್ಕೆ ಹಾಕಿದ ವಿದ್ಯುತ್!

ಮುಂಡಗೋಡದ ಮಾರುತಿ ಹರಿಜನ ಅವರು ಬೆಳೆ ರಕ್ಷಣೆಗೆ ಬಳಸಿದ ವಿದ್ಯುತ್ ಬಸವರಾಜ ಹರಿಜನ ಅವರ ಸಾವಿಗೆ ಕಾರಣವಾಗಿದೆ.

ಮುಂಡಗೋಡಿನ ಓಣಿಕೇರಿಯ ಮಾರುತಿ ಹರಿಜನ ಅವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವುದಕ್ಕಾಗಿ ಅವರು ಬೇಲಿ ನಿರ್ಮಿಸಿದ್ದರು. ಅದಾಗಿಯೂ ಕಾಡು ಪ್ರಾಣಿಗಳು ಆಗಮಿಸುತ್ತಿದ್ದರಿಂದ ಆ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿದ್ದರು.

ಹಾನಗಲ್ಲಿನ ಬಸವರಾಜ ಹರಿಜನ (22) ಹಾಗೂ ಹರೀಶ ಹರಿಜನ ಎಂಬಾತರು ಈ ವಿಷಯ ಅರಿವಿಲ್ಲದೇ ವಿದ್ಯುತ್ ಬೇಲಿ ಸ್ಪರ್ಶಿಸಿದರು. ಪರಿಣಾಮ ಬಸವರಾಜ ಹರಿಜನ ಸಾವನಪ್ಪಿದರು. ಹರೀಶ ಹರಿಜನ ಸಹ ಗಂಭೀರ ಪ್ರಮಾಣದಲ್ಲಿ ಪೆಟ್ಟು ಮಾಡಿಕೊಂಡರು. ಹರೀಶ ಹರಿಜನ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಯಿತು.

ಈ ವಿಷಯದ ಬಗ್ಗೆ ಸಮಾಜದ ಮುಖಂಡರಲ್ಲಿ ಹಾನಗಲ್ ಬಾಳಂಬಿಯ ಸುಭಾಷ ಹರಿಜನ ಚರ್ಚಿಸಿದರು. ಅದಾದ ನಂತರ ಮುಂಡಗೋಡಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page