6

ಈಶ್ವರ ಮಲ್ಪೆ ತಂಡದ ಸಾಹಸ: ನದಿ ಆಳದಲ್ಲಿ ದೇವರ ಹುಡುಕಾಟ!

ಕುಮಟಾ ಮೂರೂರು ಬೊಗ್ರಿಬೈಲ್‌ನ ಅಘನಾಶಿನಿ ನದಿ ಆಳದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ದೇವರ ಹುಡುಕಾಟ ನಡೆಸುತ್ತಿದ್ದಾರೆ. ಮೂರು ದಿನಗಳಿಂದ ಶೋಧ ನಡೆಸಿದರೂ ದೇವರು ಸಿಕ್ಕಿಲ್ಲ. ಅದಾಗಿಯೂ ಅವರು ಹುಡುಕಾಟ ನಿಲ್ಲಿಸಿಲ್ಲ!

800 ವರ್ಷಗಳ ಐತಿಹ್ಯ ಹೊಂದಿದ ನಂದಿಕೇಶ್ವರ ದೇವಾಲಯದ ಅವಶೇಷಗಳಿಗಾಗಿ ಈಶ್ವರ ಮಲ್ಪೆ ಹುಡುಕಾಟ ನಡೆದಿದೆ. ದೇವಾಲಯ ಆಡಳಿತ ಮಂಡಳಿಯವರು ಅಷ್ಟಮಂಗಲ ಪ್ರಶ್ನೆ ಕೇಳಿದಾಗ ದೇವರ ಮೂರ್ತಿ ಮಣ್ಣಿನಲ್ಲಿ ಹೂತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಆ ಮೂರ್ತಿಗಾಗಿ ಶೋಧ ನಡೆಯುತ್ತಿದೆ.

`300 ವರ್ಷಗಳ ಹಿಂದೆ ಈ ಭಾಗದ ಉಪ್ಪಿನಪಟ್ಟಣ ಪ್ರಸಿದ್ಧ ಬಂದರು ಆಗಿತ್ತು. ಉಪ್ಪು ಸಾಗಾಣಿಕೆ ಮೂಲಕ ಈ ಬಂದರು ಪ್ರಸಿದ್ಧಿ ಪಡೆದಿತ್ತು. ಈ ದೇವಾಲಯದಲ್ಲಿ ವಾಸವಾಗಿದ್ದ ಬಸವ ಉಪ್ಪು ತಿನ್ನಲು ಬಂದರಿಗೆ ಹೋದಾಗ ಗುಂಡಿನ ಏಟು ತಗುಲಿತು. ಆ ವೇಳೆ ಉಪ್ಪಿನಪಟ್ಟಣದಿಂದ ದೇವಾಲಯದವರೆಗೂ ರಕ್ತ ಕಲೆಗಳು ಮೂಡಿದ್ದವು. ಇದರ ಜೊತೆಗೆ ದೇವಾಲಯದಲ್ಲಿದ್ದ ಶಿಲಾಮಯ ನಂದಿಯ ಕಾಲಿಗೆ ಹಾನಿಯಾಗಿತ್ತು. ಭಿನ್ನಗೊಂಡ ನಂದಿಯ ಮೂರ್ತಿಯನ್ನು ಜನ ಮೂಲಗದ್ದೆಯ ಅಘನಾಶಿನಿ ತಟದಲ್ಲಿ ಬಿಟ್ಟಿದ್ದರು. ಆ ಮೂರ್ತಿಗಾಗಿ ಇದೀಗ ಹುಡುಕಾಟ ನಡೆಯುತ್ತಿದೆ’ ಎಂದು ಅಲ್ಲಿನವರು ವಿವರಿಸಿದರು.

ಆ ಕಾಲದಿಂದ ಈಗಿನವರೆಗೂ ದೇವಾಲಯದಲ್ಲಿ ಪೂಜೆ-ಪುನಸ್ಕಾರ ನಡೆಯುತ್ತ ಬಂದಿದೆ. ದೇವಾಲಯದ ಅಷ್ಟಬಂಧ ಕಾರ್ಯಕ್ರಮದಲ್ಲಿ ಅಷ್ಠಮಂಗಲ ಪ್ರಶ್ನಾವಳಿ ಹಾಕಿದಾಗ ದೇವಾಲಯದ ಮೂಲ ನಂದಿಯಲ್ಲಿ ಇನ್ನು ಚೈತನ್ಯವಿರುವುದು ಗೊತ್ತಾಗಿದೆ. ಹೀಗಾಗಿ ಆ ನಂದಿಯ ಹುಡುಕಿಕೊಡುವಂತೆ ದೇಗುಲ ಸಮಿತಿಯವರು ಈಶ್ವರ ಮಲ್ಪೆ ಅವರಿಗೆ ಫೋನಾಯಿಸಿದ್ದಾರೆ. ಹೀಗಾಗಿ ಈಶ್ವರ ಮಲ್ಪೆ ಅವರು ನದಿ ಆಳದಲ್ಲಿ ಶೋಧ ನಡೆಸಿದ್ದಾರೆ.

ಸದ್ಯ ಈಶ್ವರ ಮಲ್ಪೆ ಅವರು ಇನ್ನೊಂದು ಕಾರ್ಯಾಚರಣೆಗಾಗಿ ಭದ್ರಾವತಿಗೆ ತೆರಳಿದ್ದಾರೆ. ಮೇ 22ರ ನಂತರ ಮತ್ತೆ ಕುಮಟಾಗೆ ಬಂದು ಮೂರ್ತಿ ಶೋಧ ನಡೆಸಲಿದ್ದಾರೆ. `300 ವರ್ಷಗಳ ಹಿಂದೆ ನೀರಿಗೆ ಬಿಟ್ಟ ಮೂರ್ತಿ ಈಗ ಎಲ್ಲಿದೆ ಎಂದು ಹುಡುಕುವುದು ಕಷ್ಟ. ಅದಾಗಿಯೂ ನದಿ ಆಳದ ಮಣ್ಣಿನಲ್ಲಿ ಶೋಧ ಕಾರ್ಯ ನಡೆದಿದೆ’ ಎಂದು ಈಶ್ವರ ಮಲ್ಪೆ ಅವರು ಪ್ರತಿಕ್ರಿಯಿಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page