6

OLX ಜಾಹೀರಾತು: ಕಾರು ಇಲ್ಲ.. ಕಾಸೂ ಇಲ್ಲ!

OLX ಜಾಹೀರಾತು ನೋಡಿ ಕಾರು ಖರೀದಿಗೆ ಆಸಕ್ತಿವಹಿಸಿದ ಶಿರಸಿಯ ಮಹಾದೇವ ಕೋಚರೇಕರ್ ಅವರು 4.50 ಲಕ್ಷ ರೂ ಕಳೆದುಕೊಂಡಿದ್ದಾರೆ!

ಶಿರಸಿಯ ಕೆಳಗಿನ ಎಸಳೆಯಲ್ಲಿ ವಾಸವಾಗಿರುವ ಮಹಾದೇವ ಕೋಚರೇಕರ್ ಅವರು ನೆಟ್‌ವರ್ಕ ಇಂಜೀನಿಯರ್ ಆಗಿ ಕೆಲಸ ಮಾಡುತ್ತಾರೆ. ಕುಟುಂಬದ ಬಳಕೆಗಾಗಿ ಅವರು ಕಾರು ಹುಡುಕಾಟ ನಡೆಸಿದ್ದು, ಅಲ್ಲಿ-ಇಲ್ಲಿ ನೋಡಿದರೂ ಸರಿಯಾದ ಕಾರು ಸಿಕ್ಕಿರಲಿಲ್ಲ. ಹೀಗಾಗಿ ಅವರು OLX ಆಫ್ ಮೊರೆ ಹೋಗಿದ್ದರು.

ಶೃಂಗೇರಿಯ ರವಿಚಂದ್ರ ರೇವಣಕರ್ ಎಂಬಾತರು ತಮ್ಮ ಕಾರು ಮಾರಾಟಕ್ಕಿರುವ ಬಗ್ಗೆ OLXನಲ್ಲಿ ಮಾಹಿತಿ ಹಂಚಿಕೊOಡಿದ್ದರು. ಕೆಸರಿ ಬಣ್ಣದ ನೆಕ್ಸಾನ್ ಕಾರಿನ ಫೋಟೋ ನೋಡಿದ ಮಹಾದೇವ ಕೋಚರೇಕರ್ ಅವರು ಅಲ್ಲಿರುವ ಸಂಖ್ಯೆಗೆ ಫೋನ್ ಮಾಡಿದರು. 5 ಲಕ್ಷ ರೂಪಾಯಿಗೆ ವ್ಯವಹಾರವನ್ನು ಕುದುರಿಸಿದರು.

2024ರ ಅಕ್ಟೊಬರ್ 10ರಿಂದ 29 ನವೆಂಬರ್‌ವರೆಗೆ ರವಿಚಂದ್ರ ರೇವಣಕರ್ ಅವರಿಗೆ ಗೂಗಲ್ ಫೇ ಮೂಲಕ 4.50 ಲಕ್ಷ ರೂ ಹಣ ಪಾವತಿ ಮಾಡಿದರು. ಆದರೆ, ಮಾತುಕಥೆ ಪ್ರಕಾರ ರವಿಚಂದ್ರ ರೇವಣಕರ್ ಅವರು ಕಾರು ಕೊಡಲಿಲ್ಲ. ಕೊಟ್ಟ ಕಾಸನ್ನು ಮರಳಿಸಲಿಲ್ಲ. ಹೀಗಾಗಿ ಇದೀಗ ರವಿಚಂದ್ರ ರೇವಣಕರ್ ಅವರ ವಿರುದ್ಧ ಮಹಾದೇವ ಕೋಚರೇಕರ್ ಪೊಲೀಸ್ ದೂರು ನೀಡಿದ್ದಾರೆ.

ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರವಿಚಂದ್ರ ರೇವಣಕರ್ ಅವರ ಹುಡುಕಾಟ ನಡೆಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page