6
  • Latest

ಶಿರಸಿ ಆಸ್ಪತ್ರೆ: ಡಾ ಗಜಾನನ ಭಟ್ಟರ ಸೇವೆ ಯಾರಿಗೆ ಬೇಕು.. ಯಾರಿಗೆ ಬೇಡ..?

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿರಸಿ ಆಸ್ಪತ್ರೆ: ಡಾ ಗಜಾನನ ಭಟ್ಟರ ಸೇವೆ ಯಾರಿಗೆ ಬೇಕು.. ಯಾರಿಗೆ ಬೇಡ..?

AchyutKumar by AchyutKumar
October 11, 2024
in ಸ್ಥಳೀಯ
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ ಗಜಾನನ ಭಟ್ಟ ಅವರನ್ನು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಬೇರೆ ಯಾರೂ ಯುರೋಲಜಿಸ್ಟ್ ತಜ್ಞರಿಲ್ಲ. ಹೀಗಾಗಿ ಡಾ ಗಜಾನನ ಭಟ್ಟ ಅವರು ಈ ಜಿಲ್ಲೆಗೆ ಬೇಕು. ಡಾ ಗಜಾನನ ಭಟ್ಟ ಅವರು ಸರ್ಕಾರಿ ವೈದ್ಯರಾದರೂ ತಮ್ಮಲ್ಲಿ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಅವರು ಸಹ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ ಅವರು ಇಲ್ಲಿ ಬೇಡ!

`ಡಾ ಗಜಾನನ ಭಟ್ಟ ಅವರು ಸಾಕಷ್ಟು ಅನುಭವಿ ವೈದ್ಯರು. ಹಲವು ವಿಷಯಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಅವರಲ್ಲಿನ ಜ್ಞಾನ ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ ಸಂಪನ್ಮೂಲ. ಹೀಗಾಗಿ ಅವರನ್ನು ಇಲ್ಲಿ ಉಳಿಸಿಕೊಳ್ಳಬೇಕು’ ಎಂಬುದು ಒಂದಷ್ಟು ಜನರ ವಾದ. `ಡಾ ಗಜಾನನ ಭಟ್ಟರು ಎಷ್ಟೇ ಅಧ್ಯಯನಶೀಲರಾಗಿದ್ದರೂ ಅದು ಬೇರೆಯವರಿಗೆ ಉಪಯೋಗಕ್ಕಿಲ್ಲ. ಕೊರೊನಾ ಅವಧಿಯಲ್ಲಿ ಸಹ ಅವರು ರೋಗಿಗಳನ್ನು ಸರಿಯಾಗಿ ನೋಡಿಲ್ಲ ಎಂಬ ಆರೋಪವಿದೆ. ಹೀಗಾಗಿ ಅವರು ಇಲ್ಲಿ ಬೇಡ’ ಎಂಬುದು ಅವರನ್ನು ವಿರೋಧಿಸುವವರ ಅಭಿಪ್ರಾಯ!

ADVERTISEMENT
ADVERTISEMENT

`ಡಾ ಗಜಾನನ ಭಟ್ಟ ಅವರು ಸ್ನೇಹಪರ ವ್ಯಕ್ತಿತ್ವದವರು. ಜನಪ್ರಿಯ ವೈದ್ಯರು. ದೇಶ-ವಿದೇಶಗಳಲ್ಲಿ ಸಹ ಅವರಿಗೆ ಉತ್ತಮ ಹೆಸರಿದೆ’ ಎಂದು ಅವರ ಪರ ಮಾತನಾಡುವವರಿದ್ದಾರೆ. `ಡಾ ಗಜಾನನ ಭಟ್ಟರು ರೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಲ್ಲ. ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ ವಿನ: ಜನಪರ ಕಾಳಜಿ ಹೊಂದಿಲ್ಲ’ ಎಂದು ದೂರುವವರೂ ಇದ್ದಾರೆ. `ಜನಪ್ರತಿನಿಧಿಗಳು ಉತ್ತಮ ವೈದ್ಯರನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಬೇಕು. ಒಳ್ಳೆಯ ವೈದ್ಯರನ್ನು ಜಿಲ್ಲೆಗೆ ತರಲು ಸಾಧ್ಯವಾಗದೇ ಇದ್ದರೆ ಇದ್ದವರನ್ನು ಬೇರೆ ಕಡೆ ವರ್ಗಾಯಿಸುವ ಖಯಾಲಿಯನ್ನಾದರೂ ಬಿಡಬೇಕು’ ಎಂದು ಕೆಲವರು ಜನಪ್ರತಿನಿಧಿಗಳನ್ನು ಜಾಡಿಸಿದ್ದಾರೆ. `ಡಾ ಗಜಾನನ ಭಟ್ಟರು ಉತ್ತಮ ವೈದ್ಯರಾಗಿದ್ದರೂ ಅನೇಕ ಪ್ರಕರಣಗಳನ್ನು ಮಂಗಳೂರು, ಹುಬ್ಬಳ್ಳಿಗೆ ಶಿಫಾರಸ್ಸು ಮಾಡುತ್ತಾರೆ. ಅಧ್ಯಯನದ ನೆಪದಲ್ಲಿ ಅವರು ದೇಶ-ವಿದೇಶ ಪ್ರವಾಸ ಮಾಡುವುದರಿಂದ ಸ್ಥಳೀಯರಿಗೆ ಸಿಗುವ ಸೇವೆ ಅಷ್ಟಕಷ್ಟೆ’ ಎನ್ನುವವರ ಸಂಖ್ಯೆಯೂ ಕಡಿಮೆಯಿಲ್ಲ.

Advertisement. Scroll to continue reading.
Advertisement. Scroll to continue reading.

`ಡಾ ಗಜಾನನ ಭಟ್ಟ ಅವರು ಮೂತ್ರಕೋಶದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತಾರೆ. ಶಿರಸಿ ಮಾತ್ರವಲ್ಲದೇ ವಾರಕ್ಕೆ ಒಮ್ಮೆ ಕಾರವಾರಕ್ಕೂ ಆಗಮಿಸಿ ಜನರ ನೋವು ಆಲಿಸುತ್ತಾರೆ. ಕಿಡ್ನಿಯಲ್ಲಿ ಕಲ್ಲು ಬೆಳೆದವರಿಗೆ ಸೂಕ್ತ ಪರಿಹಾರ ಒದಗಿಸುತ್ತಾರೆ. ಹೀಗಾಗಿ ಅವರನ್ನು ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳಬೇಕು’ ಎಂಬುದು ಅವರ ಪರವಾಗಿ ಮಾತನಾಡುವವರ ಕಳಕಳಿ. ವರ್ಗಾವಣೆ ಎಂಬುದು ಸರ್ಕಾರಿ ವೃತ್ತಿಯಲ್ಲಿ ಸಹಜ ನಿಯಮವಾಗಿದ್ದು, ಡಾ ಗಜಾನನ ಭಟ್ಟ ಅವರೇ ಹೊಸಪೇಟೆಗೆ ವರ್ಗಾವಣೆ ಬಯಸಿ ಅರ್ಜಿ ಹಾಕಿದ್ದಾರೆ. ಹೀಗಿರುವಾಗ ಅವರನ್ನು ಬೀಳ್ಕೊಡುವುದರಲ್ಲಿ ತಪ್ಪೇನೂ ಇಲ್ಲ. ಅವರಿಗಿಂತ ಉತ್ತಮ ವೈದ್ಯರನ್ನು ಜಿಲ್ಲೆಗೆ ಕರೆತರುವ ಪ್ರಯತ್ನ ನಡೆಯಬೇಕು’ ಎಂಬುದು ಸಮಾನಮನಸ್ಕ ಹೋರಾಟಗಾರರ ಆಗ್ರಹ.

ಶಿರಸಿ ಸಾರ್ವಜನಿಕ ಆಸ್ಪತ್ರೆಯ ಪ್ರಭಾವಿ ವೈದ್ಯರಲ್ಲಿ ಒಬ್ಬರಾಗಿದ್ದ ಡಾ ಗಜಾನನ ಭಟ್ಟ ಅವರ ವರ್ಗಾವಣೆ ವಿಷಯ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. `ಡಾ ಗಜಾನನ ಭಟ್ಟ ಅವರು ಇಲ್ಲಿ ಬೇಡ’ ಎಂದು ಶಿರಸಿ ಭಾಗದವರು ಹೇಳುತ್ತಿದ್ದರೆ, `ಅವರು ಇಲ್ಲೇ ಇರಲಿ’ ಎಂದು ಶಿರಸಿ ಹೊರತುಪಡಿಸಿ ಉಳಿದ ಭಾಗದ ಜನ ಹೇಳುತ್ತಿದ್ದಾರೆ. ಇನ್ನೂ ಡಾ ಗಜಾನನ ಭಟ್ಟ ಅವರ ಪರ ಹಾಗೂ ವಿರೋಧವಾಗಿ ನೂರಾರು ಮೂಕರ್ಜಿಗಳು ವಿವಿಧ ಕಡೆ ಸಲ್ಲಿಕೆಯಾಗಿದೆ. ನೂರಾರು ಸಮರ್ಥನೆಗಳ ಜೊತೆ ಸಾವಿರಾರು ಆರೋಪಗಳಿವೆ. ಆದರೆ, ಅದ್ಯಾವುದಕ್ಕೂ ಅಧಿಕೃತ ದಾಖಲೆ ಒದಗಿಸಿದವರಿಲ್ಲ!

ShareSendTweetShare
ADVERTISEMENT
Previous Post

ಉಮ್ಮಚ್ಗಿ: ಸೊಸೈಟಿ ಬಳಿಯೂ ಮಟ್ಕಾ ಆಟ!

Next Post

ಕಡವಾಡದಲ್ಲಿ ದನಗಳ್ಳರ ಕಾಟ: ಗುಲಾಬಿ ಕಾರಿನ ಮೇಲೆ ಅನುಮಾನ!

Next Post

ಕಡವಾಡದಲ್ಲಿ ದನಗಳ್ಳರ ಕಾಟ: ಗುಲಾಬಿ ಕಾರಿನ ಮೇಲೆ ಅನುಮಾನ!

ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!

ಅಪರಿಚಿತ ಶವದ ಮೇಲೆ ಹಲವು ಅನುಮಾನ: ಸಾಕ್ಷಿದಾರನ ಮೇಲೆ ಸುಳ್ಳು ದೂರಿನ ಆರೋಪ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.