ಸಿದ್ದಾಪುರ: ನಾಣಿಕಟ್ಟಾ ಬಳಿಯ ಕಲಗದ್ದೆ ಭಾಗದಲ್ಲಿ ಎರಡು ದಿನಗಳಿಂದ ಆನೆ ಉಪಟಳ ಹೆಚ್ಚಾಗಿದೆ. ತೋಟ-ಗದ್ದೆಗಳಿಗೆ ನುಗ್ಗುತ್ತಿರುವ ಆನೆ ಅಲ್ಲಿನ ಫಸಲು ಹಾಳು ಮಾಡುತ್ತಿದೆ.
ತ್ಯಾಗಲಿ, ಕಲಗದ್ದೆ, ಶೀಗೆಹಳ್ಳಿ ಭಾಗದಲ್ಲಿ ಒಂಟಿ ಸಲಗ ರಂಪಾಟ ನಡೆಸಿದೆ. ಅಡಿಕೆ, ಬಾಳೆ ಗಿಡಗಳನ್ನು ಆನೆ ನಾಶ ಮಾಡಿದೆ. ಭತ್ತದ ಗದ್ದೆಗಳನ್ನು ತುಳಿದು ಹಾಳು ಮಾಡಿದೆ. ಮುಂಡಗೋಡು ಭಾಗದಿಂದ ಆನೆ ಬಂದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಭಾಗದಲ್ಲಿ ಮೊದಲು ಆನೆ ಉಪಟಳ ಇರಲಿಲ್ಲ. ಇದೀಗ ಆನೆ ಆಗಮಿಸುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಆನೆಯನ್ನು ಓಡಿಸುವಂತೆ ಅರಣ್ಯ ಇಲಾಖೆಯನ್ನು ಜನ ಒತ್ತಾಯಿಸಿದ್ದಾರೆ.
ಆನೆ ಓಡಾಟದ ವಿಡಿಯೋ ಇಲ್ಲಿ ನೋಡಿ..