ಅಂಕೋಲಾ: ಶಾಂತಾ ನಾಯಕ ಅವರ ಲಾರಿಯಲ್ಲಿ ಕ್ಲಿನರ್ ಆಗಿ ಕೆಲಸ ಮಾಡುತ್ತಿದ್ದ ನೀಲಕಂಠ ಗುನಗಾ (55) ಸಾವನಪ್ಪಿದ್ದಾರೆ.
ಶೆಟಗೇರಿಯವರಾಗಿದ್ದ ನೀಲಕಂಠ ಶಿವರಾಮ ಗುನಗಾ (55) ಬುಧವಾರ ಬೆಳಗ್ಗೆ ಎಂದಿನoತೆ ಕೆಲಸಕ್ಕೆ ಹೋಗಿದ್ದರು. ಲಾರಿಯನ್ನು ಚಾಲಕ ರಸ್ತೆ ಬದಿ ನಿಲ್ಲಿಸಿದಾಗ ಒಮ್ಮೆಲೆ ಲಾರಿಯಿಂದ ಕೆಳಗೆ ಇಳಿದಿದ್ದರು. ಆಗ `ತಲೆ ತಿರುಗುತ್ತಿದೆ’ ಎಂದು ಹೇಳಿದ್ದ ಅವರು ಅಲ್ಲಿಯೇ ಕುಳಿತುಕೊಂಡಿದ್ದರು. ನಂತರ `ಎದೆನೋವು’ ಎಂದ ಕಾರಣ ನೀಲಕಂಠ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಅಲ್ಲಿ ಪರೀಕ್ಷಿಸಿದ ವೈದ್ಯರು `ನೀಲಕಂಠ ಈಗಾಗಲೇ ಸಾವನಪ್ಪಿದ್ದಾರೆ’ ಎಂದು ಘೋಷಿಸಿದರು. ನೀಲಕಂಠ ಅವರ ಪತ್ನಿ ರೇಖಾ ಗುನಗಾ ಈ ಬಗ್ಗೆ ಪೊಲೀಸ್ ದೂರು ದಾಖಲಿಸಿ ಶವ ಪಡೆದರು.




