ಯಲ್ಲಾಪುರ: ಗೋಸಾವಿ ಗಲ್ಲಿಯನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತ ಸದಸ್ಯರಾಗುವ ಉದ್ದೇಶದಿಂದ ಪ್ರಕಾಶ ಗೋಸಾವಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಅವರು ಗ್ರಾಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ತಮ್ಮ ಉಮೇದುದಾರಿಕೆ ಸಲ್ಲಿಸಿದರು.
ಕನ್ನಡ ಸಂಘಟನೆಯ ಮೂಲಕ ಹೋರಾಟದ ಬದುಕು ಪ್ರವೇಶಿಸಿದ ಅವರು ಸರ್ಕಾರದಿಂದ ಬಡವರಿಗೆ ಮನೆ ಕೊಡಿಸುವ ಕೆಲಸ ಮಾಡಿದ್ದಾರೆ. 2004ರಲ್ಲಿ 32 ಮನೆಗಳಿಗೆ ಅರ್ಜಿ ಸಲ್ಲಿಸಿದ್ದ ಅವರು 17 ಮನೆಗಳನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದರು. ಗೋಸಾವಿಗಲ್ಲಿಯ 17 ಕುಟುಂಬದವರು ಆ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಹಿಂದುತ್ವದ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿರುವ ಪ್ರಕಾಶ ಗೋಸಾವಿ ಅವರು ಮೊದಲಿನಿಂದಲು ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ. ಬಿಜೆಪಿ ಎಸ್ಟಿ ಮೋರ್ಚಾ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರಾಗಿ ಕನ್ನಡ ಹೋರಾಟಗಳಲ್ಲಿಯೂ ಭಾಗವಹಿಸಿದ್ದಾರೆ.
ಪ್ರಕಾಶ ಗೋಸಾವಿ ಅವರು ಜೆಸಿಬಿ ಆಪರೇಟರ್ ಆಗಿದ್ದರು. ಕೆಲಕಾಲ ಗುಜುರಿ ವ್ಯಾಪಾರವನ್ನು ನಡೆಸಿದ್ದರು. ಅದಾದ ನಂತರ ವಾಹನ ಚಾಲಕರಾಗಿ ಸಹ ಜೀವನ ಕಟ್ಟಿಕೊಂಡಿದ್ದಾರೆ. ಸ್ಥಳೀಯ ಶಾಲೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಾಲಾ ಅಭಿವೃದ್ಧಿಗಾಗಿಯೂ ನಾನಾ ಚಟುವಟಿಕೆ ನಡೆಸಿದ್ದಾರೆ.
ಜನರ ನೋವಿಗೆ ಸ್ಪಂದಿಸುವ ಪ್ರಕಾಶ ಗೋಸಾವಿ ಅವರ ಗೆಲುವಿಗೆ ಪ್ರಾರ್ಥಿಸಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ದೇವಿ ಸನ್ನಿಧಿಯಲ್ಲಿ ಪ್ರಾರ್ಥಿಸಿದರು. ಪ್ರಮುಖರಾದ ರಾಮು ನಾಯ್ಕ, ಸೋಮು ನಾಯ್ಕ, ಪ್ರಹ್ಲಾದ್ ಗೋಸಾವಿ, ವಿನೋದ ಗೋಸಾವಿ, ಯುವರಾಜ ಗೋಸಾವಿ, ವಿಶಾಲ ಗೋಸಾವಿ ಇತರರು ಇದ್ದರು.