ಶಿರಸಿ: ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಹಕ್ಕಿನಲ್ಲಿರುವ ಭೂಮಿಗೆ ಸಂಬoಧಿಸಿ ನಕಲಿ ದಾಖಲೆ ಸೃಷ್ಠಿಸಿ ಅದನ್ನು ಮಾರಾಟ ಮಾಡಿದ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದೆ.
ಮರಾಠಿಕೊಪ್ಪ ಬಳಿಯ ಕಮಲಾಕರ ನರಸಿಂಹ ಭಂಡಾರಿ ಎಂಬಾತ ಲಂಡಕನಳ್ಳಿ ಗ್ರಾಮದಲ್ಲಿರುವ ಜೂಜೆಪಿನ್ ಆಲ್ಬರ್ಟ ಎಂಬಾತರ ಭೂಮಿಯನ್ನು ಸೆಂಟ್ ಮಿಲಾಗ್ರಿಸ್ ಬ್ಯಾಂಕಿನಲ್ಲಿ ಒತ್ತೆಯಿಟ್ಟು 50 ಲಕ್ಷ ರೂ ಸಾಲ ಪಡೆದಿದ್ದ. ಆದರೆ, ಸಾಲವನ್ನು ತೀರಿಸಿರಲಿಲ್ಲ. ಹೀಗಾಗಿ ಬ್ಯಾಂಕಿನವರು ಜಮೀನು ಮಾರಾಟ ಪ್ರಕ್ರಿಯೆಗೆ ನೋಟಿಸ್ ತೆಗೆದಿದ್ದು, ಇದನ್ನು ಅರಿತ ಸಾಲಗಾರರ ನಕಲಿ ದಾಖಲೆಗಳನ್ನು ಸೃಷ್ಠಿಸಿ ಆ ಭೂಮಿಯನ್ನು ಮಾರಿಕಾಂಬಾ ನಗರದ ಕಾರ್ತಿಕ ಉದಯ ನಾಯ್ಕ ಎಂಬಾತರಿಗೆ ಮಾರಿದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discussion about this post