ಯಲ್ಲಾಪುರ: ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಸಂಘದ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಜೊತೆ ಶಿಕ್ಷಕ ಸಂತೋಷ ನಾಯ್ಕ ಹಾಗೂ ಫಾರೇಸ್ಟರ್ ಜಿ ಸಂತೋಷ್ ಪ್ರತಿಸ್ಪರ್ಧಿಯಾಗಿದ್ದರು. ಈ ಪೈಕಿ ಸಂತೋಷ ನಾಯ್ಕ ಪೈಪೋಟಿ ನೀಡಿದರು. ಒಟ್ಟು 32 ಮತಗಳ ಪೈಕಿ ಸಂತೋಷ ನಾಯ್ಕ 10 ಮತಗಳನ್ನು ಪಡೆದರು. ಜಿ ಸಂತೋಷ್ 4 ಮತಗಳನ್ನು ಪಡೆದರು. 18 ಮತ ಪಡೆದ ಸಂಜೀವಕುಮಾರ ಹೊಸ್ಕೇರಿ ಗೆಲುವಿನ ನಗೆ ಬೀರಿದರು.
ಇದರೊಂದಿಗೆ ಸಂಜೀವಕುಮಾರ ಹೊಸ್ಕೇರಿ ಬೆಂಬಲಕ್ಕಿದ್ದ ಉಪಖಜಾನೆ ಸಹಾಯಕ ಲೆಕ್ಕಾಧಿಕಾರಿ ರೇಶ್ಮಾ ಶೇಟ್ 21 ಮತಗಳನ್ನು ಪಡೆದು ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯೆಯನ್ನಾಗಿಸಿದರು. ಕಂದಾಯ ಇಲಾಖೆಯ ಶಿವಕುಮಾರ್ ಪ್ರತಿಸ್ಪರ್ಧಿಯಾಗಿ 11 ಮತ ಪಡೆದರು. ನೌಕರರ ಸಂಘದ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ಶಿಕ್ಷಕ ವಿಶಾಲ ನಾಯ್ಕ 27 ಮತ ಪಡೆದು ಗೆಲುವು ಸಾಧಿಸಿದ್ದು, ಅವರ ಪ್ರತಿಸ್ಪರ್ಧಿಯಾಗಿದ್ದ ಪಿಡಿಓ ರವಿ ಪಟಗಾರ 5 ಮತಕ್ಕೆ ತೃಪ್ತಿಯಾದರು.




