ಕಾರವಾರ: ತರಬೇತಿ ನೀಡುತ್ತಿದ್ದ ಅವಧಿಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಸಮೂಹ ಸಂಪನ್ಮೂಲ ವ್ಯಕ್ತಿ ನಾಸೀರ ಖಾನ್ ಅಬ್ದುಲ್ ಕರಂ ಸಂಪೂರ್ಣವಾಗಿ ಚೇತರಿಸಿಕೊಂಡ ಹಿನ್ನಲೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಮುಂಬೈಯಲ್ಲಿದ್ದ ಮಗ ಮನೆಗೆ ಬಂದ ಖುಷಿಯಲ್ಲಿದ್ದ ಅವರು ಹೃದಯಘಾತದಿಂದ ಸಾವನಪ್ಪಿದರು.
ನಾಸೀರ್ ಖಾನ್ ನ 16ರಂದು ಎದೆನೋವಿನಿಂದ ಕುಸಿದುಬಿದ್ದಿದ್ದರು. ಇನ್ನಿತರ ಶಿಕ್ಷಕರು ಸೇರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಚಿಕಿತ್ಸೆ ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದರು. ಹೀಗಾಗಿ ಭಾನುವಾರ ಅವರನ್ನು ಬಿಡುಗಡೆ ಮಾಡಲಾಗಿದ್ದು, ಸ್ವತ: ಬೈಕ್ ಓಡಿಸಿಕೊಂಡು ನಗರದ ಎಲ್ಲಡೆ ತಿರುಗಾಡಿದ್ದರು. ಮುಂಬೈಯಿAದ ಮಗ ಊರಿಗೆ ಬಂದ ಖುಷಿಯಲ್ಲಿ ಅವರಿದ್ದರು. ಹೀಗಾಗಿ ತಮ್ಮ ಊರಾದ ಹೊನ್ನಾವರಕ್ಕೆ ತೆರಳಿದ್ದರು.
ಮಂಗಳೂರು ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಗಾಗುವಂತೆ ಕೆಲವರು ಅವರಿಗೆ ಸಲಹೆ ನೀಡಿದ್ದು, `ನಾಳೆ ಖಂಡಿತ ಹೋಗಿ ಬರುವೆ’ ಎಂಬ ಭರವಸೆ ನೀಡಿದ್ದರು. ಈ ನಡುವೆ ದಿಢೀರ್ ಭಾನುವಾರ ಸಂಜೆ ಹೃದಯಘಾತದಿಂದ ಅವರು ಕೊನೆ ಉಸಿರೆಳೆದಿದ್ದಾರೆ.
ಕಾರವಾರ ಶಿಕ್ಷಣಾಧಿಕಾರಿ ಚಂದ್ರಹಾಸ ರಾಯ್ಕರ್, ನಗೆ ಶಾಲೆಯ ಮುಖ್ಯಾಧ್ಯಾಪಕ ಅಖ್ತರ ಸೈಯದ್ ಹಾಗೂ ಸದಾಶಿವಗಡದ ಮುಖ್ಯ ಶಿಕ್ಷಕ ನಾಸಿರ್ ಶೇಖ್ ದೈಹಿಕ ಶಿಕ್ಷಣ ಪರಿವೀಕ್ಷಕರಾದ ವಿಠೋಬ ಎನ್ ನಾಯಕ, ಸಂಯೋಜಕ ಪ್ರಕಾಶ ಚೌಹಾಣ ಹಾಗೂ ಮುಖ್ಯಾಧ್ಯಾಪಕ ಅಖ್ತರ ಸೈಯದ ಅವರ ಮನೆಗೆ ತೆರಳಿ ಕಂಬನಿ ಮಿಡಿದರು.