ಕಾರವಾರ: `ಬಿಜೆಪಿಯಿಂದ ದೂರವಿರುವ ಶಾಸಕ ಶಿವರಾಮ್ ಹೆಬ್ಬಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಬಂದರೆ, ನಾವು ಚುನಾವಣೆ ಎದುರಿಸಲು ಸಿದ್ಧ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ `ಶಿವರಾಮ್ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಿರಲಿಲ್ಲ. ಈ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿರಲಿಲ್ಲ. ಬಿಜೆಪಿಯ ತತ್ವ ಸಿದ್ದಾಂತ ಅವರಿಗೆ ಒಪ್ಪಿಗೆ ಆಗೋದಿಲ್ಲ ಎನ್ನುವುದು ಸ್ಪಷ್ಟವಾಗಿದೆ’ ಎಂದರು.
`ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ಪರ ಪ್ರಚಾರ ಮಾಡಿರಲಿಲ್ಲ. ಆದರೂ ಕ್ಷೇತ್ರದಲ್ಲಿ ಸುಮಾರು 17 ಸಾವಿರ ಮತಗಳ ಲೀಡ್ ಬಿಜೆಪಿಗೆ ಬಿದ್ದಿತ್ತು. ಸದ್ಯ ಈ ಗೆಲುವಿನ ಬೆನ್ನಲ್ಲೇ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ದ ಬಿಜೆಪಿಗರು ತಿರುಗಿ ಬಿದ್ದಿದ್ದು, ಇದೇ ಕಾರಣದಿಂದ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇನೆ’ ಎಂದರು.
Discussion about this post