ಜಾರ್ಖಂಡ್’ನ ಪೂರ್ವ ಸಿಂಗ್‌ಭೂಮ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಎಳೆ ಮಕ್ಕಳು ಸೇರಿದಂತೆ ಮೂವರು ಸಾವನಪ್ಪಿದ್ದಾರೆ.
ಗೋವಿಂದಪುರ ಹಾಲ್ಟ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಎರಡು ವರ್ಷದ ಬಾಲಕ ಮತ್ತು ಮೂರು ವರ್ಷದ ಬಾಲಕಿ ಜೊತೆಯಲ್ಲಿ ಮುಂಜಾನೆ ಹಳಿ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಾವನಪ್ಪಿದ ಮೂವರು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಮೂವರು ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಪೊಟ್ಕಾ ಬ್ಲಾಕ್‌ನ ನಿವಾಸಿಗಳಾಗಿದ್ದು, ಅವರನ್ನು ಗುರುತಿಸುವ ಪ್ರಯತ್ನ ಮುಂದುವರೆದಿದೆ.
Discussion about this post