ಹಳಿಯಾಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಾಗ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೆ ಎಲ್ ಎಸ್ ವಿ ಡಿ ಐ ಟಿ ತಂಡ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಗದಗದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ನವೀನ್ ಬಿ, ರಕ್ಷಿತ್ ಜಿ, ನ್ಯೂಮನ್, ಪ್ರಶಾಂತ್ ಕೆ, ಸಾಹಿಲ್ ಕೆ, ಮಹಮ್ಮದ್ ಉಜೈಫಾ, ಅಖಿಬ್ ಅಹಮದ್, ಶೀತಲ್ ಪಿ, ಪೃಥ್ವಿ ವಿ, ಆಕಾಶ್ ಜಿ, ರಿಹಾನ್ ಭಕ್ಷ್ ಎಸ್ ಇವರುಗಳು ಮಹಾವಿದ್ಯಾಲಯದ ತಂಡವನ್ನು ಪ್ರತಿನಿಧಿಸಿದ್ದರು.
ನವೆಂಬರ್ 22ರಿಂದ 24ರವರೆಗೆ ಮೈಸೂರಿನಲ್ಲಿ ನಡೆಯಲಿರುವ ವಿಶ್ವವಿದ್ಯಾಲಯದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ ಈ ತಂಡ ಭಾಗವಹಿಸಲಿದೆ.