ಭಟ್ಕಳ: ಅಗತ್ಯಕ್ಕೆ ತಕ್ಕ ವಿದ್ಯಾರ್ಹತೆ, ಸೂಕ್ತ ದಾಖಲೆ ಇಲ್ಲದೇ ವೈದ್ಯಕೀಯ ಸೇವೆ ನೀಡುತ್ತಿದ್ದ ಕ್ಲಿನಿಕ್’ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಕ್ಲಿನಿಕ್’ಗೆ ಬೀಗ ಜಡಿದ ಅಧಿಕಾರಿಗಳು ಇಬ್ಬರು ವೈದ್ಯರಿಗೆ ನೋಟಿಸ್ ನೀಡಿದ್ದಾರೆ.
ವೈದ್ಯಾಧಿಕಾರಿ ಡಾ ಅನ್ನಪೂರ್ಣ ವಸ್ತ್ರದ್ ಹಾಗೂ ಡಾ ಸವಿತಾ ಕಾಮತ ಈ ದಾಳಿ ನಡೆಸಿದ್ದು, ಪೇಟೆ ಹನುಮಂತ ದೇವಸ್ಥಾನದ ಸಮೀಪದ ಗಂಡು ಮಕ್ಕಳ ಶಾಲೆಯ ಪಕ್ಕದ ರಂಜನ್ ಕ್ಲಿನಿಕ್’ನ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲಿನ ವಿವೇಕ ಭಟ್ ಅವರ ಬಳಿ ದಾಖಲೆಗಳಿಲ್ಲದ ಕಾರಣ ಆ ಕ್ಲಿನಿಕ್’ಗೆ ಬೀಗ ಜಡಿದರು.
ನಂತರ ಸರ್ಪನಕಟ್ಟೆಯಲ್ಲಿನ ಶ್ರೀ ದುರ್ಗಾ ಕ್ಲಿನಿಕಗೆ ತೆರಳಿದ ಅಧಿಕಾರಿಗಳು ಅಲ್ಲಿ ಬಯೋ ಮೆಡಿಕಲ್ ವೆಸ್ಟ ಸರಿಯಿಲ್ಲದ ಹಿನ್ನಲೆ ನೋಟಿಸ್ ನೀಡಿದರು. ತೆಂಗಿನಗುoಡಿ ಹೆಬಳೆ ಹೆರ್ತಾರ್ ಕ್ರಾಸ್ ಗುರುರಾಜ್ ಕ್ಲಿನಿಕ್ ಡಾ ವಿನಯ ಹೆಬ್ಬಾರ ಕ್ಲಿನಿಕ್’ಗೆ ಭೇಟಿ ನೀಡಿ ಹೋಮಿಯೋಪತಿ ವೈದ್ಯರು ಆಲೋಪತಿ ಔಷಧಿ ನೀಡುತ್ತಿರುವುದನ್ನು ಪತ್ತೆ ಮಾಡಿದರು. ಈ ಹಿನ್ನಲೆ ಅವರಿಗೂ ನೋಟಿಸ್ ನೀಡಿದರು.
ಆಜಾದ್ ನಗರದಲ್ಲಿನ ನೌಮನ್ ಕ್ಲಿನಿಕ್ ಮೇಲೆ ದಾಳಿ ನಡೆಸಿ, ಅವರಿಗೆ ಪರವಾನಿಗೆ ಪಡೆದು ಕ್ಲಿನಿಕ್ ನಡೆಸುವಂತೆ ಸೂಚಿಸಿದರು.