ಶಿರಸಿ: ಬೈಕ್ ಅಪಘಾತದಲ್ಲಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೃಷ್ಣ ಗೌಡ (43) ಎಂಬಾತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಾವೇರಿಯಿಂದ ಬೈಕಿನಲ್ಲಿ ಬಂದ ಸಾಗರ ಯಲ್ಲಾಪ್ಪ ಲಮಾಣಿ ಎಂಬಾತ ಎಕ್ಕಂಬಿ ಬಳಿ ಮುಂಡಗೋಡದ ಕೃಷ್ಣ ಗೌಡ’ರಿಗೆ ಗುದ್ದಿದ್ದ. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಕೃಷ್ಣ ಗೌಡರ ಕುಟುಂಬಕ್ಕೆ ಇದರಿಂದ ಆಘಾತವಾಗಿತ್ತು. ತಲೆಗೆ ಗಂಭೀರ ಗಾಯಗೊಂಡ ಗೌಡರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯವರು ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಪ್ರಯೋಜನವಾಗಲಿಲ್ಲ.
ಅಪಘಾತದಲ್ಲಿ ಗಾಯಗೊಂಡಿದ್ದ ಕೂಲಿಯಾಳು ಸಾವು

Leave a comment