ಅಂಕೋಲಾ: ಕೇಣಿಕ್ರಾಸ್ ಬಳಿ ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡಿದ್ದ ನೀಲೇಶ ನಾಯ್ಕ (37) ಕುಸಿದು ಬಿದ್ದು ಸಾವನಪ್ಪಿದ್ದಾರೆ.
ಹೊನ್ನಕೇರಿಯವರಾದ ಇವರು ಅನೇಕ ವರ್ಷಗಳಿಂದ ಕೇಣಿಕ್ರಾಸಿನಲ್ಲಿ ಗೂಡಂಗಡಿ ನಡೆಸುತ್ತಿದ್ದರು. ಬೆಳಗ್ಗೆ ವ್ಯಾಪಾರ ಮಾಡಲು ಬಾಗಿಲು ತೆರೆದ ಅವರು ಅಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಕ್ರೆöÊಸ್ತಮಿತ್ರ ಆಶ್ರಮಕ್ಕೆ ಕರೆದೊಯ್ಯಲಾಯಿತು. ಉಸಿರಾಟ ತೊಂದರೆಗೆ ಚಿಕಿತ್ಸೆ ನೀಡಿದ ನಂತರ ಅವರನ್ನು ಆಸ್ಪತ್ರೆಗೆ ತರಲಾಗಿದ್ದು ಅಷ್ಟರ ಒಳಗೆ ಅವರು ಉಸಿರಾಡುವುದನ್ನು ನಿಲ್ಲಿಸಿದ್ದರು.
Discussion about this post