ಯಲ್ಲಾಪುರ: ಲಿಂಗನಕೊಪ್ಪ ಕ್ರಾಸಿನ ಬಳಿ ಮಾದಕ ವ್ಯಸನ ಸೇವಿಸುತ್ತಿದ್ದ ಇಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ನ 23ರಂದು ಸಂಜೆ 6.45ಕ್ಕೆ ಆರತಿಬೈಲಿನ ಮೆಕಾನಿಕ್ ಗುರುಪ್ರಸಾದ ಇಂಗಳಗಿ (20) ಹಾಗೂ ದೋಣಗಾರದಲ್ಲಿ ಕೂಲಿ ಕೆಲಸ ಮಾಡುವ ಹರೀಶ ಭೂಪತಿ ಸಿದ್ದಿ (19) ಗಾಂಜಾ ಸೇವಿಸಿದ ನಶೆಯಲ್ಲಿದ್ದರು. ಪಿಎಸ್‌ಐ ಸಿದ್ದಪ್ಪ ಗುಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ್ದರು.
ಹೀಗಾಗಿ ಆ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ತಪಾಸಣೆ ನಡೆಸಿದ ವೈದ್ಯಾಧಿಕಾರಿಗಳು ಅವರು ಮಾದಕ ವ್ಯಸನ ಸೇವಿಸಿದನ್ನು ದೃಢಪಡಿಸಿ ವರದಿ ನೀಡಿದರು. ಈ ಹಿನ್ನಲೆ ಆ ಇಬ್ಬರ ವಿರುದ್ಧವೂ ಪೊಲೀಸ್ ಪ್ರಕರಣ ದಾಖಲಾಗಿದೆ.