ಕಾರವಾರ: ಕೈಗಾ ಅಣು ವಿದ್ಯುತ್ ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ನವೆಂಬರ್ 8ರಂದು ಅಗ್ನಿಗಾಹುತಿಯಾಗಿದ್ದು, ಇದೀಗ ಇನ್ನೊಂದು ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಶನಿವಾರ ಸಂಜೆ ವೇಳೆ ಕೈಗಾ ಅಣು ಘಟಕದ ಉದ್ಯೋಗಿಗಳನ್ನು ಕರೆದೊಯ್ಯುವ ಬಸ್ಸು ಕುಚೇಗಾರ್ ಬಳಿ ಅಗ್ನಿ ಅನಾಹುತಕ್ಕೆ ಒಳಗಾಗಿದೆ. ಈ ವೇಳೆಯಲ್ಲಿ ಸಹ ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಹೆಚ್ಚಿನ ಅವಘಡ ಸಂಭವಿಸಿಲ್ಲ.
ಬಸ್ಸು ಹೊತ್ತಿ ಉರಿಯುವುದನ್ನು ನೋಡಿದ ಸ್ಥಳೀಯರು ಬಸ್ಸು ಚಾಲಕನಿಗೆ ಮಾಹಿತಿ ನೀಡಿದ್ದು, ವಾಹನ ನಿಲ್ಲಿಸಿದ ಬಸ್ಸು ಚಾಲಕ ದೊಡ್ಡ ಪ್ರಮಾಣದ ಅಗ್ನಿ ಅನಾಹುತವನ್ನು ತಡೆದಿದ್ದಾರೆ. ನ 23ರ ಸಂಜೆ ಸಂಜೆ 7.40ರ ಆಸುಪಾಸಿನಲ್ಲಿ ಈ ವಿದ್ಯಮಾನ ನಡೆದಿದೆ.
ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡ ವಿಡಿಯೋ ಇಲ್ಲಿ ನೋಡಿ..