ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಕಾರು ಚಲಾಯಿಸುತ್ತಿದ್ದ ರಮೇಶ ನಾಯ್ಕ ಸಾವನಪ್ಪಿದ್ದಾರೆ.
ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ ಭಾನುವಾರ ಹೊನ್ನಾವರ ಕುಮಟಾ ಮಾರ್ಗವಾಗಿ ಅಂಕೋಲಾ ಕಡೆಗೆ ನ್ಯಾನೋ ಕಾರು ಓಡಿಸಿಕೊಂಡು ಬರುತ್ತಿದ್ದರು. ಕೊಡಸಣಿ ತಿರುವಿನ ಬಳಿ ಕಾರು ಅವರ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಅವರು ರಕ್ತಸ್ರಾವದೊಂದಿಗೆ ಸ್ಥಳದಲ್ಲಿಯೇ ಸಾವನಪ್ಪಿದರು.
ಅದೇ ಕಾರಿನಲ್ಲಿದ್ದ ದಿನೇಶ್ ಎಂಬಾತರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಸಂಬoಧದ ಕುರಿತು ಮಾತನಾಡುವುದಕ್ಕಾಗಿ ದಿನೇಶ ಹಾಗೂ ರಮೇಶ ಬೆಳಗ್ಗೆ ಬೇಗ ಮನೆಯಿಂದ ಹೊರಟಿದ್ದರು. ಆದರೆ, ಅಪಘಾತದ ಪರಿಣಾಮ ರಮೇಶ ಸಾವನಪ್ಪಿದ್ದು, ದಿನೇಶ ಆಸ್ಪತ್ರೆ ಸೇರಿದ್ದಾರೆ.



