6 Skip to content

ಶ್ರೀರಾಮ ಫೈನಾನ್ಸಿಗೆ ವಂಚನೆ: ಇಬ್ಬರ ಸೆರೆ

ಭಟ್ಕಳ: ಶ್ರೀರಾಮ್ ಫೈನಾನ್ಸ್’ನಲ್ಲಿ ಜನ ಹೂಡಿಕೆ ಮಾಡಿದ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ಶಾಖೆಯಲ್ಲಿ 89 ಲಕ್ಷ ರೂ ಹಣವನ್ನು ದುರುಪಯೋಗ ನಡೆದಿತ್ತು. ರಾಘವೇಂದ್ರ ರಾಜೀವ ಸ್ವಾಮಿ ಕುಂದಾಪುರ, ಆನಂದ ಮಾದೇವ ನಾಯ್ಕ ಬೆಳ್ನಿ, ರಾಘವೇಂದ್ರ ನಾಯ್ಕ ಆಸರಕೇರಿ ಫೈನಾನ್ಸ್ ನೌಕರರಾಗಿದ್ದು, ಅವರೇ ಆರೋಪಿಗಳಾಗಿದ್ದಾರೆ. ಕಂಪನಿಯ ಸೀಲ್‌ನ್ನು ನಕಲು ಮಾಡಿದ ಆರೋಪ ಇವರ ಮೇಲಿದೆ. ಸಾಲದಲ್ಲಿ ಖರೀದಿಸಿದ ವಾಹನಗಳಿಗೆ ನಕಲಿ ದಾಖಲೆ ನೀಡಿ ಅವನ್ನು ಮಾರಾಟ ಮಾಡಿದ್ದು, ಆ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು.

 

Leave a comment

Leave a Reply

You cannot copy content of this page