ಕುಮಟಾ: ಬಾಡದ ಗುಡೆಅಂಗಡಿಯ ಕಿರಣ ಗುನಗಾ ಅವರ ಎರಡೂ ಕಿಡ್ನಿ ಹಾಳಾಗಿದೆ. ಪ್ರಸ್ತುತ ಅವರ ಪತ್ನಿಗೆ ದೊರೆಯುವ ಗೃಹಲಕ್ಷ್ಮಿ ಹಣದಿಂದಲೇ ಅವರ ಕುಟುಂಬ ನಡೆಯುತ್ತಿದೆ.
ಕಿರಣ ಗುನಗಾ ಅವರಿಗೆ ಪ್ರತಿ ತಿಂಗಳ ಔಷಧ ವೆಚ್ಚಕ್ಕೆ ಸಾವಿರಾರು ರೂ ಹಣ ಅಗತ್ಯ. ವೃದ್ಧ ತಂದೆ, ಕಣ್ಣು ಕಾಣದ ತಾಯಿ ಶಾಲೆಗೆ ಹೋಗುವ ಮೂವರು ಪುತ್ರರಿಗೂ ಕಿರಣ ಅವರ ಪತ್ನಿ ಮಂಜುಳಾ ಅವರೇ ದುಡಿದು ಸಾಕುತ್ತಿದ್ದಾರೆ. ಮಳೆಗಾಲದ ಅವಧಿಯಲ್ಲಿ ಅವರ ಮನೆ ಸೋರುತ್ತದೆ. ಅಲ್ಲಿಯೇ ಎಲ್ಲರೂ ಅನಿವಾರ್ಯವಾಗಿ ವಾಸಿಸುತ್ತಿದ್ದಾರೆ. ಈ ನಡುವೆ ಸರ್ಕಾರದಿಂದ ಪಡಿತರ ಅಕ್ಕಿ ಸಿಗುವುದು ಸಹ ಈ ಕುಟುಂಬದ ಹೊಟ್ಟೆ ತುಂಬಿಸುತ್ತಿದೆ.
ಕಿರಣ ಗುನಗಾ ಕುಟುಂಬದವರಿಗೆ ಕಳೆದ ಆರು ವರ್ಷಗಳಿಂದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ನೆರವು ನೀಡುತ್ತಿದ್ದಾರೆ. ಬುಧವಾರ ಆಗ್ನೇಲ್ ರೋಡ್ರಿಗ್ಸ್ ಹಾಗೂ ಸುಧಾಕರ ನಾಯ್ಕ ಅವರ ಮನೆಗೆ ತೆರಳಿ ಆಹಾರದ ಕಿಟ್ ವಿತರಿಸಿದರು. ಕಳೆದ ಅಕ್ಟೊಬರಿನಲ್ಲಿ ಸಹÀ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದಿoದ ಮುಖ್ಯಮಂತ್ರಿ ಪರಿಹಾರ ಯೋಜನೆ ಅಡಿ ಈ ಕುಟುಂಬಕ್ಕೆ ನೆರವು ನೀಡಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆಯೂ ಜಿಲ್ಲಾಧಿಕಾರಿ ಗಮನಹರಿಸಬೇಕು ಎಂದು ಸಮಾಜ ಸೇವಕ ಪಾಂಡುರ0ಗ ನಾಯ್ಕ ಮನವಿ ಮಾಡಿದರು.
ಕಿರಣ ಗುನಗಾ ಅವರ ಮನೆ ಪರಿಸ್ಥಿತಿಯ ವಿಡಿಯೋ ಇಲ್ಲಿ ನೋಡಿ..