ಕುಮಟಾ: ಮಾಸೂರಿನ ಜಟಕ ದೇವಸ್ಥಾನ ಬಳಿಯ ನೇತ್ರಾವತಿ ಗಂಗಾಧರ ಪಟಗಾರ (39) ಕಾಣೆಯಾಗಿದ್ದಾರೆ.
ಕಳೆದ 9 ತಿಂಗಳಿನಿ0ದ ಕಾರವಾರದ ಸಾಂತ್ವಾನ ಕೇಂದ್ರದಲ್ಲಿದ್ದ ಅವರು ಈಚೆಗೆ ಮನೆಗೆ ಮರಳಿದ್ದರು. ನ 25ರಂದು ಕುಟುಂಬದವರ ಜೊತೆ ಸೇರಿ ಮದುವೆಗೆ ಹೋಗಿದ್ದರು. ಆಗ, ಅಲ್ಲಿದ್ದ ಅಜ್ಜನ ಬಳಿ `ತಮ್ಮ ಹೊಸ ಮನೆಯ ಕಟ್ಟಡಕ್ಕೆ ನೀರು ಬಿಡುವ ಕೆಲಸವಿದೆ’ ಎಂದು ಹೇಳಿ, ಹೊರಟಿದ್ದರು.
ಆದರೆ, ಹೊಸ ಮನೆ ಕಟ್ಟಡಕ್ಕೆ ನೀರು ಬಿಡಲು ಅವರು ಹೋಗಿರಲಿಲ್ಲ. ಸಂಬOಧಿಕರ ಮನೆಗೂ ಅವರು ಹೋಗಿಲ್ಲ. ಮದುವೆ ಮನೆಗೆ ಸಹ ಹಿಂತಿರುಗಿಲ್ಲ. ಎಲ್ಲಿ ಹುಡುಕಿದರೂ ನೇತ್ರಾವತಿ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಐಟಿಐ ಕಾಲೇಜಿನಲ್ಲಿ ಓದುತ್ತಿರುವ ಅವರ ಮಗ ಹರೀಶ ಗಂಗಾಧರ ಪಟಗಾರ `ತಾಯಿಯನ್ನು ಹುಡುಕಿಕೊಡಿ’ ಎಂದು ಪೊಲೀಸ್ ದೂರು ನೀಡಿದ್ದಾರೆ.