ಸಿದ್ದಾಪುರ: ಗುಜುರಿ ತುಂಬಿ ಹೊರಟ್ಟಿದ್ದ ಲಾರಿ ಕಾನಗೋಡಿನ ಬಳಿ ಪಲ್ಟಿಯಾಗಿದೆ.
ವಿವಿಧ ಪಟ್ಟಣಗಳಿಂದ ಗುಜುರಿ ತುಂಬಿಕೊ0ಡು ಹೊರಟ ಲಾರಿ ಬುಧವಾರ ಸಿದ್ದಾಪುರ ತಲುಪಿತ್ತು. ಮುಂದೆ ಶಿರಸಿ – ಸಿದ್ದಾಪುರ ಮಾರ್ಗವಾಗಿ ಲಾರಿ ಚಲಿಸಿತು. ಕಾನಗೋಡು ಬಳಿ ಸಂಚರಿಸುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿತು.
ಪರಿಣಾಮ ಲಾರಿಯ ಜೊತೆ ಗುಜುರಿ ಸಾಮಗ್ರಿಗಳು ಪಲ್ಟಿಯಾದವು. ಲಾರಿ ಚಾಲಕ ಅಲ್ಲಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡರು. ಪ್ರಸ್ತುತ ಅಡ್ಡಬಿದ್ದಿರುವ ಲಾರಿಯನ್ನು ಮೇಲೆತ್ತುವ ಪ್ರಯತ್ನ ನಡೆದಿದೆ. ಪೊಲೀಸರು ಮಾಹಿತಿ ಪಡೆದಿದ್ದಾರೆ.



