ಭಟ್ಕಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದರ ಜೊತೆ ಬೆದರಿಕೆ ಒಡ್ಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೇರಿ 7 ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಅವರ ಜೊತೆಗಿದ್ದ ರಾಘವೇಂದ್ರ ನಾಯ್ಕ, ಶ್ರೀನಿವಾಸ ನಾಯ್ಕ, ವಸಂತ ನಾಯ್ಕ, ಈಶ್ವರ ನಾಯ್ಕ, ರಾಜೇಶ ನಾಯ್ಕ ಮತ್ತು ಇತರರ ವಿರುದ್ಧ ಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರು ದಾಖಲಾಗಿದ.ಎ ಭಟ್ಕಳ ಗ್ರಾಮೀಣ ಠಾಣೆಯ ಪಿಎಸೈ ರನ್ನಗೌಡ ಶಿವನಗೌಡ ಪಾಟೀಲ ಈ ಬಗ್ಗೆ ದೂರು ನೀಡಿದ್ದಾರೆ.
ನ 22ರಂದು ಬೆಳಿಗ್ಗೆ 11 ಗಂಟೆಗೆ ಕಡವಿನಕಟ್ಟಾ ರೈಲ್ವೆ ಬ್ರಿಡ್ಜ್ ಸಮೀಪ ಪರಮೇಶ್ವರ ನಾಯ್ಕ, ಅವರ ಮಗ ಪ್ರಮೋದ ನಾಯ್ಕ ಮತ್ತು ಗಣಪತಿ ಶನಿಯಾರ ನಾಯ್ಕ ಹಾಗೂ ಇತರರ ನಡುವೆ ಗಲಾಟೆಯಾಗಿತ್ತು. ಅದರ ಸಂಬAಧ ನ 22ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ತೆರಳಿದಾಗ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ತಾಂತ್ರಿಕ ಸಮಸ್ಯೆ ಇರುವ ಬಗ್ಗೆ ಪೊಲೀಸರು ಮನವರಿಕೆ ಮಾಡಿದ್ದರು. ಅದಾಗಿಯೂ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಠಾಣೆಗೆ ಹೋದವರು ಪಟ್ಟು ಹಿಡಿದಿದ್ದರು. ಠಾಣಾ ದಿನಚರಿಯಲ್ಲಿ ಈ ವಿಷಯದ ಬಗ್ಗೆ ನಮೂದಿಸಲಾಗಿತ್ತು.
`ನ 23ರಂದು ಬೆಳ್ಳಿಗ್ಗೆ 11.45ಕ್ಕೆ ಶ್ರೀಕಾಂತ ನಾಯ್ಕಸಹಿತ ಆರೋಪಿತರು ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಗೆ ಆಗಮಿಸಿದ್ದರು. ಪಿಎಸೈ ಕೊಠಡಿಗೆ ಬಂದವರು ಪಿಎಸೈ ಅವರನ್ನು ಬೆದರಿಸಿದ್ದರು’ ಎಂಬುದು ಇಲ್ಲಿನ ದೂರು. `ರೌಡಿ ವರ್ತನೆಯನ್ನು ತೋರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಧಮಕಿ ಹಾಕಿದ್ದಾರೆ’ ಎಂದು ಪಿಎಸ್‌ಐ ದೂರಿದ್ದಾರೆ.



