ಮುಂಡಗೋಡ: ಹಿಮಾಚಲ ಪ್ರದೇಶದ ಧರ್ಮಶಾಲೆಯಲ್ಲಿರುವ ಟಿಬೆಟಿಯನ್ ಆಡಳಿತದ ಮುಖ್ಯಸ್ಥರಾದ ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಮುಂಡಗೋಡಿನ ಟಿಬೆಟಿ ಕಾಲೋನಿಗೆ ಭೇಟಿ ನೀಡಿದ್ದಾರೆ.
ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಅವರು ಐದು ದಿನಗಳ ಕಾಲ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅವರು ಟಿಬೆಟಿಯನ್ ಬೌದ್ಧ ಸಂಪ್ರದಾಯದ ಗೆಲುಗ್ಫಾ ಪಂಥದ ಸರ್ವೋಚ್ಚ ಮುಖ್ಯಸ್ಥ 105ನೇ ಗಾಡೆನ್ ಟ್ರಿಪಾ ಅವರ ಸಿಂಹಾಸನರೋಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಅವರು ಟಿಬೆಟಿಯನ್ನರ ಕುಂದು ಕೊರತೆಗಳನ್ನು ಆಲಿಸಿದ್ದು, ಇಲ್ಲಿನ ಬೌದ್ಧಮಠಗಳಿಗೆ, ಶಾಲೆಗಳಿಗೆ, ಆಸ್ಪತ್ರೆಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ವೃದ್ಧಾಶ್ರಮಗಳಿಗೆ, ಭೇಟಿ ನೀಡಲಿದ್ದಾರೆ.



