ಅಂಕೋಲಾ: ಅಂಕೋಲಾ-ಯಲ್ಲಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಸುಂಕಸಾಳದಲ್ಲಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಲಾರಿಯಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.
ನ 25ರಂದು ಗುಜರಾತಿನ ದಯಾಬೈ ರಾಥೋಡ್ ವೇಗವಾಗಿ ಲಾರಿ ಓಡಿಸಿಕೊಂಡು ಬಂದಿದ್ದು ಸುಂಕಸಾಳದಲ್ಲಿನ ವಿದ್ಯುತ್ ಕಂಬಗಳಿಗೆ ಲಾರಿ ಗುದ್ದಿದ್ದಾನೆ. ನಂತರ ಲಾರಿಯನ್ನು ಪಲ್ಟಿ ಮಾಡಿದ್ದು, ಲಾರಿ ಒಳಗಿದ್ದ ಕಾಳಿನ ಬ್ಯಾಗುಗಳಿಗೆ ಹಾನಿಯಾಗಿದೆ. ಜೊತೆಗೆ ಲಾರಿ ಕ್ಲೀನರ್ ಕೈಲಾಶ ಸಿಂಗ್ ಹಾಗೂ ಆ ಲಾರಿಯಲ್ಲಿ ಸಂಚರಿಸುತ್ತಿದ್ದ ಮಹ್ಮದ್ ನಾಹೀದ್ ಸಹ ಗಾಯಗೊಂಡಿದ್ದಾರೆ.