ಕಾರವಾರ: ಸದಾಶಿವಗಡ ತಿರುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ.
ಕುಮಟಾ ಉಪ್ಪಿನ ಪೊಟ್ಟಣದ ಉದಯ ಅಂಬಿಗ ಅವರು ನ 27ರಂದು ಗೋವಾ ಹೋಗಿದ್ದರು. ರಾತ್ರಿ ಅಲ್ಲಿಂದ ಮರಳುವಾಗ ವೇಗವಾಗಿ ಬೈಕ್ ಓಡಿಸಿಕೊಂಡು ಬಂದಿದ್ದರು. ಅವರ ಬೈಕಿನ ಹಿಂದೆ ಜಾರ್ಖಂಡದ ನಿರೋಜ ಸೊರೆ ಕೂತಿದ್ದರು. ರಸ್ತೆ ಮೇಲಿನ ಹಂಪುಗಳನ್ನು ಸಹ ಗಮನಿಸದೇ ಅವರು ಬೈಕ್ ಓಡಿಸುತ್ತಿದ್ದರು.
ರಾತ್ರಿ 9.30ರ ವೇಳೆಗೆ ಚಿತ್ತಾಕುಲ ಪೊಲೀಸ್ ಠಾಣೆ ಕಡೆಯಿಂದ ದೇವಭಾಗ ಕ್ರಾಸಿನ ಕಡೆ ಸದಾಶಿವಗಡ ಬಳಿಯ ದೇವವಾಡದ ವಿನೋದ ಗಾಂವ್ಕರ ಚಲಿಸುತ್ತಿದ್ದರು. ಗೋವಾ ಕಡೆಯಿಂದ ಬಂದ ಉದಯ ಅಂಬಿಗ ತಮ್ಮ ಬೈಕನ್ನು ವಿನೋದ ಅಂಬಿಗ ಅವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದರು. ಎರಡು ಬೈಕಿನಲ್ಲಿದ್ದವರು ನೆಲಕ್ಕೆ ಬಿದ್ದರು.
ಈ ಅಪಘಾತದ ರಭಸಕ್ಕೆ ಉದಯ ಅಂಬಿಗ, ನಿರೋಜ ಸೊರೆ ಜೊತೆ ವಿನೋದ ಗಾಂವ್ಕರ್ ಸಹ ಗಾಯಗೊಂಡರು. ಅದೇ ದಿನ ರಾತ್ರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ವಿನೋದ ಅಂಬಿಗ ಬೈಕ್ ಅಪಘಾತಕ್ಕೆ ಕಾರಣರಾದವರ ವಿರುದ್ಧ ಪೊಲೀಸ್ ದೂರು ನೀಡಿದರು.



