ಯಲ್ಲಾಪುರ: ಡಿಸೆಂಬರ್ 6ರಂದು ಯಲ್ಲಾಪುರ ಪೊಲೀಸರು ವಿವಿಧ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ.
ವಿವಿಧ ಅಪರಾಧ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ವಾಹನಗಳನ್ನು ಪೊಲೀಸರು ಹರಾಜಿಗೆ ಇಟ್ಟಿದ್ದಾರೆ. ಎರಡು ಸುಸ್ಥಿತಿಯಲ್ಲಿರುವ ವಾಹನಗಳ ಜೊತೆ 23 ಅನುಪಯುಕ್ತ ವಾಹನಗಳು ಇಲ್ಲಿವೆ.
ಡಿಸೆಂಬರ್ 6ರಂದು ಬೆಳಗ್ಗೆ 10 ಗಂಟೆಗೆ ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಪೊಲೀಸ್ ವಸತಿ ಗೃಹದ ಬಳಿ ಹರಾಜು ನಡೆಯಲಿದೆ. ನ್ಯಾಯಾಲಯದ ಆದೇಶದ ಪ್ರಕಾರ ಈ ವಾಹನಗಳನ್ನು ವಿಲೇವಾರಿ ಮಾಡುವುದಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.
ಆಸಕ್ತರು ಪೊಲೀಸ್ ಠಾಣೆಗೆ ತೆರಳಿ ವಾಹನಗಳನ್ನು ನೋಡಬಹುದು. ಅತಿ ಹೆಚ್ಚು ದರ ಕೂಗಿ ಹಣ ಪಾವತಿಸಿದವರಿಗೆ ಈ ವಾಹನ ಹಸ್ತಾಂತರವಾಗಲಿದೆ.