ಭಟ್ಕಳ: ರಂಗಿನಕಟ್ಟಾ ಬಳಿ ಕೋರ್ಟನ ಹತ್ತಿರ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕಲಿಲ್ಲ.
ನ 27ರ ಸಂಜೆ ಅಬ್ದುಲ್ ಶೇಖ್ ಓಡಿಸಿಕೊಂಡು ಬಂದ ಬೈಕ್ ಹುಸೇನ್ ಶಬ್ಬರ್ ಇಸ್ಮಾಯಲ್ ಗನಿ’ಗೆ (64) ಡಿಕ್ಕಿಯಾಗಿತ್ತು. ಹುಸೇನ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು. ಪಾದಚಾರಿಯನ್ನು ಭಟ್ಕಳ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬಂದರು ರಸ್ತೆ ಕೊಕ್ತಿ ನಗರದ ಹುಸೇನ್ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನಪ್ಪಿದರು.