ಅಂಕೋಲಾ: ಅರಣ್ಯಾಧಿಕಾರಿಗಳ ದಬ್ಬಾಳಿಕೆ ವಿರುದ್ಧ ರೈತ ಸಂಘದವರು ಶಿರಗುಂಜಿಯಲ್ಲಿ ಪ್ರತಿಭಟಿಸಿದರು.
ಅರಣ್ಯ ಸಿಬ್ಬಂದಿಯ ಅನಗತ್ಯ ಕಿರುಕುಳ, ಮನೆ ನಾಶ, ಬೆಳೆ ನಷ್ಟ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದಿAದ ಈ ಪ್ರತಿಭಟನೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ `ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಸರಕಾರ ಕ್ರಮ ತೆಗೆದುಕೊಳ್ಳಬೇಕು. ರೈತರಿಗಾದ ಹಾನಿಯನ್ನು ಅರಣ್ಯ ಇಲಾಖೆ ಭರಿಸಬೇಕು. ತಪ್ಪು ಮಾಡಿದ ಸಿಬ್ಬಂದಿ ಮೇಲೆ ಶಿಸ್ತುಕ್ರಮವಾಗಬೇಕು’ ಎಂದು ಆಗ್ರಹಿಸಿದರು.
ರೈತ ಮುಖಂಡರಾದ ಕೇಶವ ನಾಯಕ, ಚಂದ್ರು ಗೌಡ, ಮಾದೇವ ಗೌಡ, ದೇವಣ್ಣ ನಾಯಕ, ಗ್ರಾ.ಪಂ. ಸದಸ್ಯ ದಯಾ ನಾಯಕ, ಅನಂತ ಗೌಡ, ಸುಕ್ರು ಗೌಡ ಪ್ರತಿಭಟನೆಯಲ್ಲಿದ್ದರು.