ಯಲ್ಲಾಪುರ: ದೇಹಳ್ಳಿ ಗ್ರಾ ಪಂ ಸಿಬ್ಬಂದಿ ರಾಮಚಂದ್ರ ಮುನ್ಯಾ ಕುಣಬಿ (35) ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ.
ದೇಹಳ್ಳಿ ಹಿರಿಯಾಳದ ರಾಮಚಂದ್ರ ಕುಣಬಿ ವಿಕಲಚೇತನರಾಗಿದ್ದರು. ಅವರು ದೇಹಳ್ಳಿ ಗ್ರಾಮ ಪಂಚಾಯತ ಗೃಂಥಾಲಯದಲ್ಲಿ ಗೃಂಥಪಾಲಕರಾಗಿದ್ದರು. ಗುರುವಾರ ಸಂಜೆ ತಮ್ಮ ಮೂರು ಚಕ್ರದ ವಾಹನದಲ್ಲಿ ದೆಹಳ್ಳಿ ಬಳಗಾರ ಮಾರ್ಗವಾಗಿ ಸಂಚರಿಸುತ್ತಿದ್ದಾಗ ಅವರ ಬೈಕಿನ ಹಿಂದಿನ ಚಕ್ರ ಮುರಿದಿದೆ.
ಎಡಭಾಗದ ಚಕ್ರ ತುಂಡಾದ ಕಾರಣ ಮೂರು ಚಕ್ರದ ಅಂಗವಿಕಲರ ವಾಹನ ಪಲ್ಟಿಯಾಗಿದೆ. ಅವರ ಬೈಕು ಗಟಾರಕ್ಕೆ ಹೋಗಿ ಬಿದ್ದಿದ್ದು, ರಾಮಚಂದ್ರ ಕುಣಬಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಇದನ್ನು ನೋಡಿದ ಶ್ರೀಪತಿ ರಾಮಚಂದ್ರ ಮುದ್ದೇಪಾಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ನಂತರ ಆಂಬುಲೆನ್ಸ್ ಮೂಲಕ ಶವವನ್ನು ಜಿಲ್ಲಾಸ್ಪತ್ರೆಗೆ ಮುಟ್ಟಿಸಿದರು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡರು.
ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.