ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಲಿಸಿದ ವಿಆರ್‌ಎಲ್ ಲಾರಿ ಅಂಕೋಲಾದ ನವಗದ್ದೆಯ ಬಳಿ ಪಲ್ಟಿಯಾಗಿದೆ.
ನ 26ರಂದು ಗದಗದ ಸತೀಶಕುಮಾರ ಕರಹಟ್ಟಿ ಎಂಬಾತರು ಈ ಲಾರಿ ಓಡಿಸುತ್ತಿದ್ದರು. ರಾತ್ರಿ ವೇಳೆ ಅತಿ ವೇಗದ ಚಾಲನೆ ಮಾಡಿದ ಅವರು ಲಾರಿಯನ್ನು ಗಟಾರಕ್ಕೆ ಇಳಿಸಿದರು.
ಯಲ್ಲಾಪುರದಿಂದ ಅಂಕೋಲಾ ಕಡೆ ಹೊರಟ ಲಾರಿ ನವಗದ್ದೆ ಗ್ರಾಮದಲ್ಲಿ ಪಲ್ಟಿಯಾಯಿತು. ಪರಿಣಾಮ ಲಾರಿ ಜಖಂ ಆಗಿದೆ. ಲಾರಿ ಒಳಗಿದ್ದ ಪಾರ್ಸಲ್ ಸಾಮಗ್ರಿಗಳು ಬೀದಿ ಪಾಲಾಗಿದೆ.
ಹೀಗಾಗಿ ಕಾರವಾರ ವಿಆರ್‌ಎಲ್ ಕಚೇರಿಯ ಬ್ರಾಂಚ್ ಮ್ಯಾನೇಜರ್ ದೀಪಕ ನಾಯ್ಕ ಲಾರಿ ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.