ಕಾರವಾರ: ಕೈಗಾ ಅಣು ಘಟಕದ ಆಸ್ಪತ್ರೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ ತುಷಾರ ರಾಯ್ಕರ್ ಶನಿವಾರ ನಿವೃತ್ತರಾಗಲಿದ್ದಾರೆ.
ಅಂಕೋಲಾ ತಾಲೂಕಿನ ಶಿಂಗನಮಕ್ಕಿಯವರಾದ ಡಾ ತುಷಾರ್ ರಾಯ್ಕರ್ ಅವರು ಎನ್‌ಪಿಸಿಐಎಲ್ ಕೈಗಾದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ನಂತರ ಪದೋನ್ನತಿಪಡೆದು ಮೆಡಿಕಲ್ ಸುಪ್ರಿಡೆಂಟ್ ಆದರು.
ತಮ್ಮ ಸೇವಾ ಅವಧಿಯ 32 ವರ್ಷಗಳ ಕಾಲದಲ್ಲಿಯೂ ಅವರು ಕೈಗಾ ಅಣು ವಿದ್ಯುತ್ ಯೋಜನೆಯ ಉದ್ಯೋಗಿ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ಸಲಹೆ ನೀಡಿದ್ದಾರೆ. ಕೈಗಾ ಅಣು ವಿದ್ಯುತ್ ಘಟಕದ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಸಂಘಟಿಸುವ ವೈದ್ಯಕೀಯ ಶಿಬಿರಗಳಲ್ಲಿಯೂ ಅವರು ಭಾಗವಹಿಸುತ್ತಿದ್ದರು.



