ಕಾರವಾರ: ಅಡ್ಡಾದಿಡ್ಡಿ ಬಸ್ಸು ಓಡಿಸಿದ ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಅದೇ ಬಸ್ಸಿನ ನಿರ್ವಾಹಕ ಪೊಲೀಸ್ ದೂರು ನೀಡಿದ್ದಾರೆ. ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ.
ಕಾರವಾರದಿಂದ ಮಲ್ಲಾಪುರ ಮಾರ್ಗವಾಗಿ ಸಂಚರಿಸುವ ಬಸ್ಸಿನ ಚಾಲಕ ಗುರನಗೌಡ ಪಾಟೀಲ ವಿರುದ್ಧ ನಿವಾಹಕ ಶಿವಾನಂದ ಕರಿಕಟ್ಟಿ ದೂರು ನೀಡಿದ್ದಾರೆ. `ನ 26ರಂದು ಕಾರವಾರದಿಂದ ಮಲ್ಲಾಪುರಕ್ಕೆ ಬಸ್ಸು ಓಡಿಸಿದ ಗುರನಗೌಡ ಪಾಟೀಲ ಅಲ್ಲಿಂದ ಮರಳುವಾಗ ಅತ್ಯಂತ ವೇಗವಾಗಿ ವಾಹನ ಓಡಿಸಿದ್ದಾರೆ’ ಎಂಬುದು ಶಿವಾನಂದ ಕರಿಕಟ್ಟಿ ಅವರ ದೂರು.
`ವೇಗವಾಗಿ ವಾಹನ ಓಡಿಸಿದ್ದರಿಂದ ಬಸ್ಸು ತಗ್ಗಿನಲ್ಲಿ ಬಿದ್ದು ಎದ್ದಿದೆ. ಇದರಿಂದ ಹಿಂದೆ ಕೂತಿದ್ದ ತನ್ನ ತಲೆ ಬಸ್ಸಿನ ಮೇಲ್ಬಾಗಕ್ಕೆ ಬಡಿದು ಪೆಟ್ಟಾಗಿದೆ. ಆಗ ಬಿದ್ದಿದ್ದರಿಂದ ಬೆನ್ನಿಗೂ ನೋವಾಗಿದೆ’ ಎಂದು ಬಸ್ಸಿನ ಗುನಗಿವಾಡದಲ್ಲಿ ವಾಸವಾಗಿರುವ ಶಿವಾನಂದ ಕರಿಕಟ್ಟಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.