ಶಿರಸಿ: ಶುಕ್ರವಾರ ಸಂಜೆ ಮಳಲಗಾಂವಿನ ಬಳಿ ಬೈಕ್ ಅಪಘಾತ ನಡೆದಿದೆ.
ಕೆಡಿಸಿಸಿ ಬ್ಯಾಂಕಿನ ಸಿಬ್ಬಂದಿ ಸಂತೋಷ ಬನ್ನಿಹಳ್ಳಿ ಈ ಮಾರ್ಗದಲ್ಲಿ ಬೈಕ್ ಓಡಿಸುತ್ತಿದ್ದರು. ರಸ್ತೆ ಮೇಲಿನ ಹೊಂಡ ತಪ್ಪಿಸುವ ಬರದಲ್ಲಿ ಬೈಕು ಅವರ ನಿಯಂತ್ರಣ ತಪ್ಪಿತು. ಪರಿಣಾಮ ಅವರು ನೆಲಕ್ಕೆ ಬಿದ್ದು ಗಾಯಗೊಂಡರು.
ದಾಸನಕೊಪ್ಪ ಬ್ಯಾಂಕಿನಲ್ಲಿ ಅವರು ಕರ್ತವ್ಯ ಮಾಡುತ್ತಿದ್ದು, ಕೆಲಸ ಮುಗಿಸಿ ಶಿರಸಿ ಕಡೆ ಹೊರಟಿದ್ದರು. ಆಗ ಬೈಕಿನ ಜೊತೆ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಗಾಯಗೊಂಡ ಅವರಿಗೆ ಸ್ಥಳೀಯರು ನೀರು ಕೊಟ್ಟು ಉಪಚರಿಸಿದರು. ನಂತರ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.