ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಗಣೇಶ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದಾಗ ಈತ ಅವರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ. ಸಂಜೆ ಅವರು ಮನೆಗೆ ಬಂದಾಗ ಮನೆ ಒಳಗಡೆಯಿಂದ ಚಿಲಕ ಹಾಕಿಕೊಂಡಿತ್ತು. ಹೀಗಾಗಿ ಅಣ್ಣನ ಮನೆ ಪಾರ್ಟೇಶನ್ ತೆರೆದು ಅಲ್ಲಿಂದ ಅವರು ಮನೆ ಒಳಗೆ ಪ್ರವೇಶಿಸಿದ್ದು, ಆಗ ಕಳ್ಳತನ ನಡೆದಿರುವುದು ಗೊತ್ತಾಯಿತು.
ಗೋದ್ರೇಜ್ ಕಪಾಟಿನ ಬಾಗಿಲು ತೆರೆದ ಕಳ್ಳರು ಅಲ್ಲಿದ್ದ ಬಂಗಾರದ ಬುಗುಡಿ, ಸರಪಳಿ, ಉಂಗುರ ಸೇರಿ 1.26 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಗಣೇಶ ನಾಯ್ಕ ದೋಚಿದ್ದ. ಕಳ್ಳತನ ನಡೆದ ದಿನದಿಂದ ಜಯಂತ ನಾಯ್ಕ ಅವರ ಅಣ್ಣನ ಮಗ ಗಣಪತಿ ನಾಯ್ಕ ಕಾಣದಿರುವ ಕಾರಣ ಆತನ ಮೇಲೆ ಅನುಮಾನ ಮೂಡಿತ್ತು.
ಪೊಲೀಸರು ಆತನನ್ನು ಹುಡುಕಿ ಗಣೇಶ ನಾಯ್ಕ ಬಳಿಯಿದ್ದ 1.26 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. 21 ಗ್ರಾಂ ಚಿನ್ನದ ಜೊತೆ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದರು.
ನ್ಯಾಯಾಲಯ ಗಣೇಶ ನಾಯ್ಕ’ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ತಲೆಮರೆಸಿಕೊಂಡಿದ್ದ ಕಳ್ಳನನ್ನು ಸಿಪಿಐ ಸೀತಾರಾಮ, ಪಿಎಸ್‌ಐ ಅನೀಲ ಹಾಗೂ ಪೊಲೀಸ್ ಸಿಬ್ಬಂದಿ ಉಪಾಯವಾಗಿ ಹಿಡಿದರು